Select Your Language

Notifications

webdunia
webdunia
webdunia
webdunia

ಆಂಬ್ಯುಲೆನ್ಸ್ ಗೆ ದಾರಿ ಮಾಡಿ ಕೊಡದ ತಪ್ಪಿಗೆ ಕಾರು ಮಾಲಿಕನಿಗೆ ಬಿತ್ತು 2.5 ಲಕ್ಷ ದಂಡ: ವಿಡಿಯೋ

Kerala Ambulance

Krishnaveni K

ತ್ರಿಶ್ಶೂರ್ , ಸೋಮವಾರ, 18 ನವೆಂಬರ್ 2024 (15:33 IST)
Photo Credit: X
ತ್ರಿಶ್ಶೂರ್: ಆಂಬ್ಯುಲೆನ್ಸ್ ಬರುತ್ತಿದ್ದರೆ ಒಂದು ಜೀವ ಉಳಿಸುವ ನಿಟ್ಟಿನಿಂದ ಅದಕ್ಕೆ ದಾರಿ ಮಾಡಿಕೊಡಬೇಕು ಎಂಬುದು ಸಾಮಾನ್ಯ ಜ್ಞಾನವಾಗಿದೆ. ಆದರೆ ಅದನ್ನು ಮರೆತು ಅಮಾನುಷವಾಗಿ ನಡೆದುಕೊಂಡ ತಪ್ಪಿಗೆ ಕೇರಳದ ತ್ರಿಶ್ಶೂರ್ ನಲ್ಲಿ ಕಾರು ಮಾಲಿಕನಿಗೆ ಬರೋಬ್ಬರಿ 2.5 ಲಕ್ಷ ರೂ. ದಂಡ ವಿಧಿಸಲಾಗಿದೆ.

ಪೊನ್ನಾನಿಯಿಂದ ತ್ರಿಶ್ಶೂರ್ ಮೆಡಿಕಲ್ ಕಾಲೇಜು ಕಡೆಗೆ ರೋಗಿಯೊಬ್ಬರನ್ನು ಹೊತ್ತುಕೊಂಡು ತುರ್ತಾಗಿ ಆಂಬ್ಯುಲೆನ್ಸ್ ಸಾಗುತ್ತಿತ್ತು. ಆದರೆ ಆಂಬ್ಯುಲೆನ್ಸ್ ಎದುರಿಗೆ ಚಲಿಸುತ್ತಿದ್ದ Maruti Suzuki Ciaz ಕಾರು ಎಷ್ಟೇ ಹಾರ್ನ್ ಹಾಕಿದರೂ ದಾರಿ ಬಿಡಲಿಲ್ಲ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಾಮಾನ್ಯವಾಗಿ ಎಷ್ಟೇ ಟ್ರಾಫಿಕ್ ಇದ್ದರೂ ಆಂಬ್ಯುಲೆನ್ಸ್ ಗಳಿಗೆ ಇತರೆ ವಾಹನಗಳು ದಾರಿ ಮಾಡಿಕೊಡಲೇಬೇಕಾಗುತ್ತದೆ. ಆದರೆ ಇಲ್ಲಿ ಎಷ್ಟೇ ಹಾರ್ನ್ ಹೊಡೆದರೂ ಸೈಡು ಬಿಡದೇ ಬೇಕೆಂದೇ ಕಾರು ಚಾಲಕ ಆಂಬ್ಯುಲೆನ್ಸ್ ಗೆ ಬ್ಲಾಕ್ ಮಾಡುತ್ತಿದ್ದ. ಇದು ಟ್ರಾಫಿಕ್ ಪೊಲೀಸರ ಗಮನಕ್ಕೆ ಬಂದಿದೆ.

ಈ ಸಂಬಂಧ ನೇರವಾಗಿ ಕಾರು ಮಾಲಿಕರ ಮನೆಗೆ ತೆರಳಿದ ಟ್ರಾಫಿಕ್ ಪೊಲೀಸರು 2.5 ಲಕ್ಷ ರೂ.ಗಳ ದಂಡ ಪಾವತಿಸುವಂತೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಘಟನೆ ಬಗ್ಗೆ ಸಾಕಷ್ಟು ಪ್ರತಿಕ್ರಿಯೆ ಬಂದಿದ್ದು ಕಾರು ಚಾಲಕನಿಗೆ ಛೀಮಾರಿ ಹಾಕಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಮೀನು ಹಿಡಿಯುತ್ತಿದ್ದ ವೇಳೆ ಘಟಪ್ರಭಾ ನದಿ ಹಿನ್ನೀರಿನಲ್ಲಿ ಮುಳುಗಿದ ತಂದೆ, ಇಬ್ಬರು ಮಕ್ಕಳು