Select Your Language

Notifications

webdunia
webdunia
webdunia
webdunia

ಅಂಬೇಡ್ಕರ್ ವಿರೋಧಿ ಹೇಳಿಕೆ: ಅಮಿತ್ ಶಾ ವಿರುದ್ಧ ಕಠಿಣ ಕ್ರಮಕ್ಕೆ ಕೇಜ್ರಿವಾಲ್ ಒತ್ತಾಯ

ಅಂಬೇಡ್ಕರ್ ವಿರೋಧಿ ಹೇಳಿಕೆ: ಅಮಿತ್ ಶಾ ವಿರುದ್ಧ ಕಠಿಣ ಕ್ರಮಕ್ಕೆ ಕೇಜ್ರಿವಾಲ್ ಒತ್ತಾಯ

Sampriya

ನವದೆಹಲಿ , ಬುಧವಾರ, 18 ಡಿಸೆಂಬರ್ 2024 (19:54 IST)
ನವದೆಹಲಿ: ಸಂಸತ್ತಿನಲ್ಲಿ ಬಿ.ಆರ್. ಅಂಬೇಡ್ಕರ್ ವಿರೋಧಿ ಹೇಳಿಕೆ ನೀಡುವ ಮೂಲಕ ಕೋಟ್ಯಂತರ ಜನರಿಗೆ ನೋವಾಗಿದ್ದು, ಕೇಂದ್ರ ಸಚಿವ ಅಮಿತ್ ಶಾ ಅವರ ವಿರುದ್ಧ ಕಠಿಣ ಕ್ರಮಕ್ಕೆ ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷದ ವಿರುದ್ಧ ಅಮಿತ್ ಶಾ ವಾಗ್ದಾಳಿ ನಡೆಸಿದ ಅವರು ಅಂಬೇಡ್ಕರ್ ಬದಲು ದೇವರ ಸ್ಮರಣೆ ಮಾಡಿ ಎಂದರು.  ಅಂಬೇಡ್ಕರ್ ಹೆಸರು ಹೇಳುವುದು ಕಾಂಗ್ರೆಸ್‌ನವರಿಗೆ ಫ್ಯಾಸನ್ ಆಗ್ಬೀಟ್ಟಿದೆ ಎಂದರು.

ದೇಶದ ಕೋಟ್ಯಂತರ ದಲಿತರು ಮತ್ತು ವಂಚಿತ ವರ್ಗಗಳಿಗೆ ಬಾಬಾಸಾಹೇಬ್ ಅಂಬೇಡ್ಕರ್ ದೇವರಿಗಿಂತ ಕಡಿಮೆಯಿಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಹಕ್ಕುಗಳನ್ನು ನೀಡಿದ್ದರಿಂದ ಇಂದು ಕೋಟಿಗಟ್ಟಲೆ ವಂಚಿತರು ಬದುಕಿದ್ದಾರೆ ಎಂದರು.

ಅಮಿತ್ ಶಾ ಬೆಂಬಲಕ್ಕೆ ಪ್ರಧಾನಿ ಮೋದಿ ಬಂದಿರುವ ರೀತಿ ನೋಡಿದರೆ, ಅಮಿತ್ ಶಾ ಹೇಳಿರುವುದು ಬಿಜೆಪಿಯ ತಂತ್ರ ಎಂಬಂತೆ ಕಾಣುತ್ತಿದೆ. ಅಮಿತ್ ಶಾ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುತ್ತೇವೆ... ಇದರೊಂದಿಗೆ ದೇಶದ ಮೂಲೆ ಮೂಲೆಗಳಿಗೂ ಹೋಗುತ್ತೇವೆ. ದೆಹಲಿ ಚುನಾವಣೆಗೂ ಮುನ್ನ ನಾವು ದೆಹಲಿಯ ಪ್ರತಿ ಮನೆಗೂ ಹೋಗುತ್ತೇವೆ. ಇದನ್ನು ಖಂಡಿಸುತ್ತೇವೆ ಎಂದರು.

ಇದೇ ವೇಳೆ ರಾಜ್ಯಸಭೆಯಲ್ಲಿ ಅಂಬೇಡ್ಕರ್ ಕುರಿತು ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ವಿರುದ್ಧ ಆಪ್ ಪ್ರತಿಭಟನೆ ನಡೆಸಿತು.


Share this Story:

Follow Webdunia kannada

ಮುಂದಿನ ಸುದ್ದಿ

ಗುಡಿಪಲ್ಲಿ ಬಳಿ ಭೀಕರ ರಸ್ತೆ ಅಪಘಾತ: ಐವರು ದುರ್ಮರಣ