Select Your Language

Notifications

webdunia
webdunia
webdunia
webdunia

ಗುಡಿಪಲ್ಲಿ ಬಳಿ ಭೀಕರ ರಸ್ತೆ ಅಪಘಾತ: ಐವರು ದುರ್ಮರಣ

ಗುಡಿಪಲ್ಲಿ ಬಳಿ ಭೀಕರ ರಸ್ತೆ ಅಪಘಾತ: ಐವರು ದುರ್ಮರಣ

Sampriya

ಕೋಲಾರ , ಬುಧವಾರ, 18 ಡಿಸೆಂಬರ್ 2024 (19:07 IST)
ಕೋಲಾರ: ಮುಳಬಾಗಿಲು ತಾಲ್ಲೂಕಿನ ಆಂಬ್ಲಿಕಲ್ ಸಮೀಪದ ಗುಡಿಪಲ್ಲಿ ಮುಖ್ಯ ರಸ್ತೆಯ ಬಳಿ 3 ದ್ವಿಚಕ್ರ ವಾನಗಳಿಗೆ ಬೊಲೆರೊ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನಪ್ಪಿ, ಒಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವ ಘಟನೆ ಇಂದು ನಡೆದಿದೆ.

3 ದ್ವಿಚಕ್ರ ವಾಹನಗಳಿಗೆ ಬೊಲೆರೊ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಐವರು ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಪುರುಷರು ಸಾವನ್ನಪ್ಪಿದ್ದಾರೆ.  ಇನ್ನೂ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಮುಳಬಾಗಲು ತಾಲ್ಲೂಕಿನ ನಾಗನಹಳ್ಳಿಯ ವೆಂಕಟರಾಮಪ್ಪ (50) ಹಾಗೂ ಗಾಯತ್ರಿ (43) ದಂಪತಿಗಳು. ಕೋನಂಗುಂಟೆ ಗ್ರಾಮದ ವೆಂಕಟರಾಮಪ್ಪ (40) ಹಾಗೂ ಅಲುವೇಲಮ್ಮ (30) ದಂಪತಿಗಳು ಹಾಗೂ ಕೋನಂಗುಂಟೆ ಗ್ರಾಮದ ರಾಧಮ್ಮ ಮೃತ ದುರ್ದೈವಿಗಳು.

ಈ ಸಂಬಂಧ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕೂಲಿ ಕೆಲಸ ಮಾಡಿಕೊಂಡು ಮನೆಗೆ ದ್ವಿಚಕ್ರ‌‌ ವಾಹನದಲ್ಲಿ ಹೋಗುತ್ತಿರುವಾಗ ಈ ಭೀಕರ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಬೊಲೊರೊ ವಾಹನ ಸವಾರನ ಅಜಾಗರೂಕತೆ ಮತ್ತು ಅತಿವೇಗವೇ ಕಾರಣ ಎನ್ನಲಾಗಿದೆ. ಈ ಕುರಿತು ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಾಲಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸುವ ಮಾತೇ ಇಲ್ಲ: ಸಿಎಂ ಸಿದ್ದರಾಮಯ್ಯ ಭರವಸೆ