ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಉತ್ತರ ಪ್ರದೇಶ ಮೂಲದ ಟೆಕಿ ಅತುಲ್ ಸುಭಾಷ್ ಬಗ್ಗೆ ಆತನ ಬಂಧಿತ ಪತ್ನಿ ನಿಖಿತಾ ಸಿಂಘಾನಿಯಾ ಕೆಲವೊಂದು ಸ್ಪೋಟಕ ವಿಚಾರಗಳನ್ನು ಹೇಳಿದ್ದಾಳೆ.
ಅತುಲ್ ಸುಭಾಷ್ ತನ್ನ ಪತ್ನಿ ಮನೆಯವರ ಕಿರುಕುಳಕ್ಕೆ ಬೇಸತ್ತು ವಿಡಿಯೋ ಮಾಡಿ ಬೆಂಗಳೂರಿನ ಫ್ಲ್ಯಾಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಪತ್ನಿ ಮಹಿಳೆಯರ ಪರ ಇರುವ ಕಾರಣ ನೀಡಿ ತನಗೆ ಹಿಂಸೆ ನೀಡುತ್ತಿದ್ದಾಳೆ, ಮಗನ ಮುಖವನ್ನೂ ನೋಡಲು ಬಿಡುತ್ತಿಲ್ಲ ಎಂದು ಆಪಾದಿಸಿದ್ದ.
ಅದರ ಅನ್ವಯ ಪೊಲೀಸರು ನಿಖಿತಾ ಮತ್ತು ಆಕೆಯ ತಾಯಿ, ಸಹೋದರನನ್ನು ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದರು. ಇದೀಗ ಪೊಲೀಸರು ನಿಖಿತಾಳನ್ನು ವಿಚಾರಣೆಗೊಳಪಡಿಸಿದ್ದು, ಈ ವೇಳೆ ನಿಜವಾದ ಸಂತ್ರಸ್ತೆ ನಾನು, ಅತುಲ್ ಅಲ್ಲ ಎಂದಿದ್ದಾಳೆ.
ನಾನಾಗಿಯೇ ಅತುಲ್ ಮನೆ ಬಿಟ್ಟು ಹೋಗಿರಲಿಲ್ಲ. ಆತನೇ ಕಿರುಕುಳ ನೀಡಿ ನಾನು ಹೋಗುವಂತೆ ಮಾಡಿದ್ದ. ಪ್ರತಿಯೊಂದು ವಿಚಾರಕ್ಕೂ ಕಿರಿಕ್ ತೆಗೆಯುತ್ತಿದ್ದ. ಅಡುಗೆ ಚೆನ್ನಾಗಿಲ್ಲ ಎಂದರೆ ಕಿರಕುಳ ನೀಡುತ್ತಿದ್ದ. ನಾನ್ ವೆಜ್ ಮಾಡದಿದ್ದರೂ ಮಾಡಿ ಎಂದು ಒತ್ತಾಯಿಸುತ್ತಿದ್ದ. ಆದರೂ ನಾನು ಮನೆ ಬಿಟ್ಟು ಹೋಗಿರಲಿಲ್ಲ.
ಆದರೆ ಅತುಲ್ ನಾನಾಗಿಯೇ ಮನೆ ಬಿಟ್ಟು ಹೋಗುವಂತೆ ಮಾಡಿ. ನಾವು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದೆವು. ಆತನ ಸಾವಿಗೂ ನನಗೂ ಸಂಬಂಧವಿಲ್ಲ. ನಿಜವಾದ ಸಂತ್ರಸ್ತೆ ನಾನು. ಆದರೆ ನನ್ನನ್ನು ಯಾಕೆ ಅರೆಸ್ಟ್ ಮಾಡಿದ್ದೀರಿ ಎಂದು ನಿಖಿತಾ ಪೊಲೀಸರ ಮುಂದೆ ಗೋಳು ತೋಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.