ಬೆಂಗಳೂರು: ಟೆಕಿ ಅತುಲ್ ಸುಭಾಷ್ ಸಾವಿಗೆ ಕಾರಣವಾಗಿದ್ದಾರೆ ಎನ್ನಲಾದ ಪತ್ನಿ ನಿಖಿತಾ ಸಿಂಘಾನಿಯಾ ಮತ್ತು ಆಕೆಯ ತಾಯಿ, ಸಹೋದರನನ್ನು ಪೊಲೀಸರು ಸೆರೆ ಹಿಡಿದಿದ್ದೇ ರೋಚಕವಾಗಿತ್ತು.
ಅತುಲ್ ಸಾಯುವ ಮನ್ನ ಪತ್ನಿ ನಿಖಿತಾ ಮತ್ತು ಮನೆಯವರು ಕಿರುಕುಳ ನೀಡಿದ್ದರ ಬಗ್ಗೆ ವಿವರವಾಗಿ ವಿಡಿಯೋದಲ್ಲಿ ಹೇಳಿಕೊಂಡಿದ್ದ. ಈ ಕಾರಣಕ್ಕೆ ಪೊಲೀಸರು ಅವರ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದರು. ಇದರ ಸುಳಿವು ಸಿಕ್ಕ ಬೆನ್ನಲ್ಲೇ ನಿಖಿತಾ ಮತ್ತು ಮನೆಯವರು ಮಗನನ್ನು ಬಂಧುಗಳ ಮನೆಯಲ್ಲಿ ಬಿಟ್ಟು ತಾವೆಲ್ಲರೂ ಬೇರೆ ಬೇರೆ ಕಡೆಗೆ ಪರಾರಿಯಾಗಿದ್ದರು.
ಫೋನ್ ಮೂಲಕ ಪೊಲೀಸರು ತಮ್ಮನ್ನು ಪತ್ತೆ ಹಚ್ಚಬಹುದು ಎಂಬ ಭಯಕ್ಕೆ ಯಾರಿಗೂ ಕರೆ ಮಾಡುತ್ತಿರಲಿಲ್ಲ. ಅನಿವಾರ್ಯವಾದರೆ ಕೇವಲ ವ್ಯಾಟ್ಸಪ್ ಕಾಲ್ ಮೂಲಕ ಆಪ್ತರನ್ನು ಸಂಪರ್ಕಿಸುತ್ತಿದ್ದರು. ಆದರೆ ಅಕಸ್ಮಾತ್ತಾಗಿ ನಿಖಿತಾ ಮಾಮೂಲು ಕರೆ ಮಾಡಿದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಳು.
ಮೊದಲು ನಿಖಿತಾರನ್ನು ಹರ್ಯಾಣದ ಪಿಜಿಯಲ್ಲಿ ಸೆರೆ ಹಿಡಿಯಲಾಯಿತು. ಬಳಿಕ ಆಕೆಯ ತಾಯಿ ಮತ್ತು ಸಹೊದರ ಉತ್ತರ ಪ್ರದೇಶದ ಹೋಟೆಲ್ ನಲ್ಲಿ ಸಿಕ್ಕಿಬಿದ್ದಿದ್ದರು. ಬಳಿಕ ಮೂವರನ್ನೂ ಬೆಂಗಳೂರಿಗೆ ಕರೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇದೀಗ ಮೂವರನ್ನೂ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.