Webdunia - Bharat's app for daily news and videos

Install App

ಮೋದಿ ತವರಿನಲ್ಲಿ ಸೈಲೆಂಟ್, ವಿದೇಶದಲ್ಲಿ ಅದಾನಿಗಾಗಿ ಲಾಬಿ: ರಾಹುಲ್ ಗಾಂಧಿ ವಾಗ್ದಾಳಿ

Krishnaveni K
ಶುಕ್ರವಾರ, 14 ಫೆಬ್ರವರಿ 2025 (13:53 IST)
ನವದೆಹಲಿ: ತವರಿನಲ್ಲಿ ಸೈಲೆಂಟ್, ವಿದೇಶಕ್ಕೆ ಹೋದಾಗ ಸ್ನೇಹಿತ ಅದಾನಿಗಾಗಿ ಲಾಬಿ ನಡೆಸುವುದೇ ಮೋದಿ ಕೆಲಸ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಭಾರತೀಯ ಪ್ರಧಾನಿ ಮೋದಿ ಅಮೆರಿಕಾ ಪ್ರವಾಸದ ಬಗ್ಗೆ ರಾಹುಲ್ ಟ್ವೀಟ್ ಮಾಡಿ ಟೀಕೆ ಮಾಡಿದ್ದಾರೆ. ತವರಿನಲ್ಲಿ ಅದಾನಿ ಬಗ್ಗೆ ಏನೇ ಕೇಳಿದ್ರೂ ಮೋದಿ ಸೈಲೆಂಟ್ ಆಗಿರ್ತಾರೆ. ವಿದೇಶಕ್ಕೆ ಹೋದಾಗ ಅಲ್ಲಿ ಅಧ್ಯಕ್ಷರ ಜೊತೆ ತಮ್ಮ ಸ್ನೇಹಿತನನ್ನು ಭ್ರಷ್ಟಾಚಾರ ಆರೋಪಗಳಿಂದ ರಕ್ಷಿಸಲು ಗುರಾಣಿ ಹಿಡಿದುಕೊಂಡು ನಿಲ್ಲುತ್ತಾರೆ ಎಂದು ರಾಹುಲ್ ಟೀಕೆ ಮಾಡಿದ್ದಾರೆ.

ಅಮೆರಿಕಾದಲ್ಲಿ ಭಾರತೀಯ ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಕ್ರಮ ಆರೋಪಗಳು ಬಂದಿದ್ದವು. ಈ ಹಿನ್ನಲೆಯಲ್ಲಿ ರಾಹುಲ್ ಈ ರೀತಿ ವಾಗ್ದಾಳಿ ನಡೆಸಿದ್ದಾರೆ. ಗೌತಮ್ ಅದಾನಿಯನ್ನು ಕೇಂದ್ರ ಸರ್ಕಾರ ರಕ್ಷಿಸುತ್ತಿದೆ ಎಂದು ರಾಹುಲ್ ಮತ್ತು ಕಾಂಗ್ರೆಸ್ ನಾಯಕರು ಮೊದಲಿನಿಂದಲೂ ಆರೋಪಿಸುತ್ತಲೇ ಬಂದಿದ್ದಾರೆ.

‘ಮೋದಿ ಪ್ರಕಾರ ತಮ್ಮ ಸ್ನೇಹಿತನ ಪಾಕೆಟ್ ತುಂಬಿಸುವುದು ರಾಷ್ಟ್ರ ಕಟ್ಟುವ ಕೆಲಸ. ಭ್ರಷ್ಟಾಚಾರ ದೇಶದ ಸಂಪತ್ತನ್ನು ಲೂಟಿ ಹೊಡೆಯುವಾಗ ಮೋದಿಗೆ ವೈಯಕ್ತಿಕ ವಿಚಾರ ದೊಡ್ಡದಾಗುತ್ತದೆ’ ಎಂದು ರಾಹುಲ್ ಟೀಕಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments