ವಯನಾಡಿನಲ್ಲಿ ಸಂತ್ರಸ್ತರನ್ನು ನೋಡಿ ರಾಹುಲ್ ಗಾಂಧಿಗೆ ತಂದೆಯ ಸಾವಿನ ನೆನಪು: ಇಂದೂ ವಯನಾಡಿನಲ್ಲೇ ಅಕ್ಕ-ತಮ್ಮ ಮೊಕ್ಕಾಂ

Krishnaveni K
ಶುಕ್ರವಾರ, 2 ಆಗಸ್ಟ್ 2024 (12:30 IST)
ವಯನಾಡು:  ತಾವು ಪ್ರತಿನಿಧಿಸುವ ವಯನಾಡಿನಲ್ಲಿ ಗುಡ್ಡ ಕುಸಿತದಿಂದಾಗಿ ಭಾರೀ ಸಾವು-ನೋವು ಸಂಭವಿಸಿದ್ದು ನಿನ್ನೆಯಿಂದ ರಾಹುಲ್ ಗಾಂಧಿ ಮತ್ತು ಸಹೋದರಿ ಪ್ರಿಯಾಂಕ ವಾದ್ರಾ ಇಲ್ಲಿಯೇ ಬಿಡುಬಿಟ್ಟಿದ್ದಾರೆ. ಇಲ್ಲಿನ ಸಂತ್ರಸ್ತರನ್ನು ಭೇಟಿಯಾದ ಬಳಿಕ ನಮಗೆ ನಮ್ಮ ತಂದೆಯ ಸಾವಿನ ನೆನಪಾಯಿತು ಎಂದು ರಾಹುಲ್ ಹೇಳಿಕೊಂಡಿದ್ದಾರೆ.

ನಿನ್ನೆ ಬೆಳಿಗ್ಗೆಯಿಂದ ರಾಹುಲ್ ತಮ್ಮ ಸಹೋದರಿ ಪ್ರಿಯಾಂಕ ಜೊತೆ ವಯನಾಡಿನಲ್ಲೇ ಇದ್ದಾರೆ. ನಿನ್ನೆ ಗುಡ್ಡಕುಸಿತವಾದ ಜಾಗ, ಸಂತ್ರಸ್ತರ ಕೇಂದ್ರಗಳಿಗೆ ಭೇಟಿ ನೀಡಿದ ರಾಹುಲ್-ಪ್ರಿಯಾಂಕ ಜೋಡಿ ಪರಿಹಾರ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಅಲ್ಲದೆ, ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ.

ಸಂತ್ರಸ್ತರನ್ನು ಬಿಗಿದಪ್ಪಿ ಸಂತೈಸಿದ ರಾಹುಲ್ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಇವರನ್ನು ನೋಡುತ್ತಿದ್ದರೆ ನಮ್ಮ ತಂದೆಯ ಸಾವು ನೆನಪಾಯಿತು. ಇದು ಅದಕ್ಕಿಂತಲೂ ಘೋರ ದುಃಖದ ಸಂದರ್ಭ. ಇಲ್ಲಿರುವವರು ಇಡೀ ಕುಟುಂಬದವರನ್ನೇ ಕಳೆದುಕೊಂಡಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.

ಇಂದೂ ಕೂಡಾ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿರುವ ರಾಹುಲ್ ಪರಿಹಾರ ಕಾರ್ಯಕ್ಕೆ ನೆರವಾಗಲು ಸಲಹೆ ಸೂಚನೆ ನೀಡಿದ್ದಾರೆ. ಬಳಿಕ ಮುಂಡಕೈ ಅರಣ್ಯಾಧಿಕಾರಿಗಳ ಕಚೇರಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಪರಾಹ್ನವೂ ಗ್ರಾಮ ಪಂಚಾಯತಿ ಅಧಿಕಾರಿಗಳೊಂದಿಗೆ ರಾಹುಲ್ ಸಭೆ ನಡೆಸಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಥಾಯ್ಲೆಂಡ್‌ನಲ್ಲಿ 66 ವರ್ಷ ರಾಣಿಯಾಗಿ ಮೆರೆದಿದ್ದ ರಾಜಮಾತೆ ಸಿರಿಕಿತ್ ಕಿತಿಯಾಕಾರ್ ಇನ್ನಿಲ್ಲ

ಮತ್ತೆ ರಾಜ್ಯ ಸರ್ಕಾರದ ಕಿವಿ ಹಿಂಡಿದ ಮೋಹನ್ ದಾಸ್ ಪೈ: ಇಲಾಖೆಗಳಲ್ಲಿ ರೆಡ್‌ ಕಾರ್ಡ್‌ ಫಿಕ್ಸ್‌ ಆಗಿದೆ ಎಂದಿದ್ಯಾಕೆ

ರಾಜ್ಯದ ರೈತರಿಗೆ ವಂಚಿಸಿದ ತನ್ನ ಸಂಬಂಧಿಕರ ಪರ ನಿಂತ ಜಮೀರ್ ಅಹ್ಮದ್: ನಾಚಿಕೆಯಾಗ್ಬೇಕು ಎಂದ ಜೆಡಿಎಸ್

ರಸ್ತೆ ಗುಂಡಿ ತಪ್ಪಿಸಲು ಹೋಗಿ ಯುವತಿ ಸಾವು: ಇನ್ನೆಷ್ಟು ಬಲಿಯಾಗ್ಬೇಕು ಎಂದು ಆರ್ ಅಶೋಕ್ ಆಕ್ರೋಶ

ಗಂಡನ ಬಳಿ ಒಬ್ಬ ಹೆಂಡತಿ ಬಯಸುವುದು ಇಷ್ಟೇ

ಮುಂದಿನ ಸುದ್ದಿ
Show comments