Select Your Language

Notifications

webdunia
webdunia
webdunia
webdunia

ವಯನಾಡಿನ ದುರಂತವನ್ನು ಕಣ್ಣಾರೆ ಕಂಡು ಜೀವಂತವಾಗಿ ಮರಳಿದ ಕನ್ನಡಿಗ

Wayanad landslide

Krishnaveni K

ವಯನಾಡು , ಶುಕ್ರವಾರ, 2 ಆಗಸ್ಟ್ 2024 (10:21 IST)
ವಯನಾಡು: ಕೇರಳದ ವಯನಾಡಿನಲ್ಲಿ ನಡೆದ ಗುಡ್ಡ ಕುಸಿತ ದುರಂತದಲ್ಲಿ ಸಾವಿನ ದವಡೆಯಿಂದ ಪಾರಾಗಿ ಬಂದ ಕನ್ನಡಿಗ ಸ್ವಾಮಿಶೆಟ್ಟಿ ಈಗ ತವರು ಚಾಮರಾಜನಗರಕ್ಕೆ ಬಂದಿದ್ದಾರೆ. ವಯನಾಡಿನ ದುರಂತವನ್ನು ಕಣ್ಣಾರೆ ಕಂಡ ವ್ಯಕ್ತಿ ಇವರು.

ಸ್ವಾಮಿ ಶೆಟ್ಟಿ ವಯನಾಡಿನಲ್ಲಿ ಜೀವಂತವಾಗಿ ಉಳಿದಿದ್ದೇ ರೋಚಕ ಕತೆಯಾಗಿದೆ. ವಯನಾಡು ದುರಂತ ನಡೆಯುವ ಎರಡು ದಿನ ಮೊದಲು ಚೂರ್ಲಮಲದಲ್ಲಿರುವ ಸ್ವಾಮಿಶೆಟ್ಟಿಅಣ್ಣ ತೀರಿಕೊಂಡಿದ್ದರು. ಅವರ ಅಂತ್ಯ ಸಂಸ್ಕಾರೆಂದು ಸ್ವಾಮಿ ಶೆಟ್ಟಿ ಚೂರ್ಲಮಲಕ್ಕೆ ತೆರಳಿದ್ದರು.

ಅಂತ್ಯ ಸಂಸ್ಕಾರ ಮುಗಿದ ಬಳಿಕವೂ ಸ್ವಾಮಿ ಅಲ್ಲೇ ಇದ್ದರು. ದುರಂತ ನಡೆಯುವುದಕ್ಕೆ ಮೊದಲು ನಿರಂತರ ಮಳೆಯಾಗುತ್ತಿತ್ತು. ಇರುವಝಿಂಜಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿತ್ತು. ಇದನ್ನು ಅತ್ತಿಗೆಯ ಬಳಿ ಹೇಳಿದಾಗ ಅವರು ಇದೆಲ್ಲಾ ಸಾಮಾನ್ಯ ಎಂದಿದ್ದಾರೆ. ಆದರೂ ಏನೋ ಅಪಾಯವಾಗಬಹುದು ಎಂಬ ಅನುಮಾನ ಬಂದು ದನಗಳ ಹಗ್ಗ ಬಿಚ್ಚಿ ಬಿಟ್ಟಿದ್ದರಂತೆ. ಮಧ್ಯರಾತ್ರಿ 11.30 ರ ವೇಳೆಗೆ ಪ್ರವಾಹದಲ್ಲಿ ಬಂದ ಮರದ ದಿಮ್ಮಿಯೊಂದು ಬಾಗಿಲಿಗೆ ಬಂದು ಬಡಿದಿತ್ತು. ತಕ್ಷಣವೇ ಹಿಂಬಾಗಲಿನ ಮೂಲಕ ಮನೆಯವರನ್ನೆಲ್ಲಾ ಕರೆದುಕೊಂಡು ಒಂದು ಬೇಲಿಯ ಸಹಾಯದಿಂದ ಎಲ್ಲರನ್ನೂ ರಕ್ಷಿಸಿದ್ದಾರೆ. ಮನೆಯಲ್ಲಿದ್ದ ಮೂವರನ್ನು ಕರೆದುಕೊಂಡು ಮನೆಯ ಹಿಂದಿನ ಗುಡ್ಡ ಏರಿದ್ದಾರೆ. ಗುಡ್ಡ ಏರುತ್ತಿದ್ದಂತೇ ಮತ್ತೊಮ್ಮೆ ಗುಡ್ಡಕುಸಿತವಾಗಿದೆ. ಅವರ ಕಣ್ಣೆದುರೇ ಹಲವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಸಾವಿನ ಆಕ್ರಂದನವನ್ನು ಹತ್ತಿರದಿಂದಲೇ ನೋಡಿದ್ದಾರೆ. ಆದರೆ ಏನೂ ಮಾಡಲಾಗದ ಅಸಹಾಯಕ ಸ್ಥಿತಿ. ಜುಲೈ 24 ರಂದು ರಕ್ಷಣಾ ಸಿಬ್ಬಂದಿಗಳನ್ನು ಅವರನ್ನು ರಕ್ಷಿಸಿ ಸಂತ್ರಸ್ತರ ಶಿಬಿರಕ್ಕೆ ಕರೆತಂದಿದ್ದಾರೆ. ಅಲ್ಲಿ ಅವರು ಕನ್ನಡ ಮಾತನಾಡುವುದನ್ನು ನೋಡಿ ಪೊಲೀಸ್ ಅಧಿಕಾರಿಯೊಬ್ಬರು ಅವರನ್ನು ತವರು ಚಾಮರಾಜನಗರಕ್ಕೆ ಕಳುಹಿಸಿಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಪಾದಯಾತ್ರೆಗೆ ಸ್ವಾಗತ: ಅಚ್ಚರಿಯ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್