Select Your Language

Notifications

webdunia
webdunia
webdunia
webdunia

ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿತ ಹೇಗಾಯ್ತು? ಇಲ್ಲಿದೆ ವಿಡಿಯೋ

Wayanad landslide

Krishnaveni K

ವಯನಾಡು , ಮಂಗಳವಾರ, 30 ಜುಲೈ 2024 (13:45 IST)
ವಯನಾಡು: ದೇವರ ನಾಡು ಎಂದೇ ಪರಿಚಿತವಾಗಿರುವ ಕೇರಳದ ವಯನಾಡು ಜಿಲ್ಲೆಯ ಮೇಪ್ಪಾಡಿನಲ್ಲಿ ಸಂಭವಿಸಿದ ಭಾರೀ ಗುಡ್ಡ ಕುಸಿತದಿಂದಾಗಿ 40 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು, ಮಳೆಯ ಅಬ್ಬರಕ್ಕೆ ಗುಡ್ಡ ಕುಸಿತವಾಗಿದೆ. ಪರಿಣಾಮ ಹಲವು ಮನೆಗಳು ನೆಲಸಮವಾಗಿದೆ. ಮಕ್ಕಳು, ಹಿರಿಯರು ಎನ್ನದೇ ಹಲವು ಮಂದಿ ಭೂ ಸಮಾಧಿಯಾಗಿದ್ದಾರೆ. ಇನ್ನಷ್ಟು ಮಂದಿ ಸಾವನ್ನಪ್ಪಿರುವ ಶಂಕೆಯಿದೆ. ಈಗಾಗಲೇ ಪರಿಹಾರ ಕಾರ್ಯಗಳೂ ಆರಂಭವಾಗಿದೆ.

ಇಂದು ಮುಂಜಾನೆ 2 ಗಂಟೆಗೆ ಮತ್ತು 4 ಗಂಟೆಯ ಸುಮಾರಿಗೆ ಎರಡು ಬಾರಿ ಗುಡ್ಡ ಕುಸಿತವಾದ ಪರಿಣಾಮ ಸಾಕಷ್ಟು ಜನ ಸಾವನ್ನಪ್ಪಿದ್ದಾರೆ. ತಕ್ಷಣವೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕಾಗಿಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಪ್ರಧಾನಿ ಮೋದಿ ಕೂಡಾ ಕೇರಳ ಸಿಎಂ ಪಿಣರಾಯಿ ವಿಜಯನ್ ಜೊತೆ ಮಾತುಕತೆ ನಡೆಸಿದ್ದು ಎಲ್ಲಾ ಸಹಾಯ ನೀಡುವುದಾಗಿ ಹೇಳಿದ್ದಾರೆ.

ಅಲ್ಲದೆ, ಗುಡ್ಡ ಕುಸಿತದಿಂದಾಗಿ ಸಾವನ್ನಪ್ಪಿದವರಿಗೆ ಕೇಂದ್ರ ಸರ್ಕಾರದ ವತಿಯಿಂದ 2 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಈ ಭಾರೀ ಗುಡ್ಡ ಕುಸಿತ ದುರಂತ ಹೇಗಾಯ್ತು ವಿಡಿಯೋ ಇಲ್ಲಿದೆ ನೋಡಿ.




Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಕೆಳಗಿಳಿಸಲು ಬಿಜೆಪಿ ಮೂಲಕ ಡಿಕೆ ಶಿವಕುಮಾರ್ ಪ್ಲ್ಯಾನ್: ಸೀಕ್ರೆಟ್ ಮಿಷನ್ ರಿವೀಲ್ ಮಾಡಿದ ಬಸನಗೌಡ ಯತ್ನಾಳ್