Select Your Language

Notifications

webdunia
webdunia
webdunia
webdunia

ಕರುಣಾಜನಕವಾಗಿದೆ ವಯನಾಡು ಚಿತ್ರಣ: ರಾಹುಲ್ ಗಾಂಧಿ ಬೇಸರ

ಕರುಣಾಜನಕವಾಗಿದೆ ವಯನಾಡು ಚಿತ್ರಣ: ರಾಹುಲ್ ಗಾಂಧಿ ಬೇಸರ

Sampriya

ಕೇರಳ , ಗುರುವಾರ, 1 ಆಗಸ್ಟ್ 2024 (19:40 IST)
Photo Courtesy X
ಕೇರಳ: ಭೀಕರ ಭೂಕುಸಿತಕ್ಕೆ ತತ್ತರಿಸಿ ಹೋಗಿರುವ ವಯನಾಡಿಗೆ ಭೇಟಿ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ತಮ್ಮವರನ್ನು ಕಳೆದುಕೊಂಡವರು ನೋವು ಕರುಣಾಜನಕವಾಗಿದೆ ಎಂದರು.

ಸಹೋದರು ಪ್ರಿಯಾಂಕ ಗಾಂಧಿ ಜತೆಗೆ ವಯನಾಡಿಗೆ ಆಗಮಿಸಿದ ರಾಹುಲ್ ಗಾಂಧಿ ಅವರು ಪ್ರವಾಹ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿದರು.

ನಂತರ ಮಾಧ್ಯಮದ ಜತೆ ಮಾತನಾಡಿದ ಅವರು, ಇಡೀ ದೇಶದಲ್ಲೇ ಅತ್ಯಂತ ಭೀಕರ ದುರಂತ ಇದಾಗಿದೆ. ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಆಗಮಿಸಿದ್ದೇವೆ. ಹಲವರು ತಮ್ಮ ಕುಟುಂಬದ ಸದಸ್ಯರನ್ನು, ಹಲವರು ತಮ್ಮ ಮನೆಗಳನ್ನು ಕಳೆದುಕೊಂಡು ಸಂಕಟಪಡುತ್ತಿರುವ ದೃಶ್ಯಗಳು ಅತ್ಯಂತ ಕರುಣಾಜನಕವಾಗಿವೆ ಎಂದರು.

ಸಂತ್ರಸ್ತರಿಗೆ ಅಗತ್ಯ ಸಹಾಯ ಮಾಡುವ ಎಲ್ಲ ಪ್ರಯತ್ನ ಮಾಡುತ್ತೇವೆ, ಬದುಕುಳಿದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಇಲ್ಲಿಯ ಸರ್ಕಾರ ಕ್ರಮಕೈಗೊಳ್ಳುವ ಭರವಸೆ ಇದೆ. ಇನ್ನೂ ಬಹಳಷ್ಟು ಕೆಲಸಗಳು ಆಗಬೇಕಿವೆ.

ಭೂ ಕುಸಿತದಂತಹ ಸಂದರ್ಭದಲ್ಲಿ ವಾಯನಾಡಿನ ಜನರು ಹಾಗೂ ಪ್ರಾಣಿಗಳ ಜೀವ ರಕ್ಷಣೆ ಹಾಗೂ ಬದುಕುಳಿದವರ ಆರೈಕೆ ಮಾಡಿದ ವೈದ್ಯರು, ನರ್ಸ್‌ಗಳು, ಆಡಳಿತ ವರ್ಗ ಮತ್ತು ಸ್ವಯಂಸೇವಕರು ಸೇರಿದಂತೆ ಸಂಕಷ್ಟಕ್ಕೆ ಸ್ಪಂದಿಸಿದ ಎಲ್ಲರಿಗೂ ನನ್ನ ಧನ್ಯವಾದಗಳನ್ನು ಸಲ್ಲಿಸಿದರು. .

Share this Story:

Follow Webdunia kannada

ಮುಂದಿನ ಸುದ್ದಿ

ರೇಪ್ ಕೇಸ್‌: ಮತ್ತೇ ಯಡಿಯೂರಪ್ಪಗೆ ಬಿಗ್‌ ರಿಲೀಫ್