Publish Date: Wed, 31 Jan 2018 (09:04 IST)
Updated Date: Wed, 31 Jan 2018 (09:08 IST)
ನವದೆಹಲಿ: ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ತಾವು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಸಹಾಯಕನ ಕೆಲಸ ಮಾಡಿದ್ದಾರೆ! ಇದೆಲ್ಲಾ ಬ್ಯಾಗ್ ಹೊರಲು ಕಷ್ಟಪಡುತ್ತಿದ್ದ ಮಹಿಳೆಯರಿಗಾಗಿ!
ಹೌದು. ಕಾಂಗ್ರೆಸ್ ನಾಯಕನ ಇನ್ನೊಂದು ಮುಖ ಈ ಮೂಲಕ ಅನಾವರಣಗೊಂಡಿದೆ. ದೆಹಲಿ-ಗುವಾಹಟಿ ನಡುವಿನ ವಿಮಾನ ಏರಿದ್ದ ರಾಹುಲ್ ಗಾಂಧಿ ಇಂತಹದ್ದೊಂದು ಕೆಲಸ ಮಾಡಿದ್ದಾರೆ.
ನಿಲ್ದಾಣ ಬಂದಾಗ ಕ್ಯಾಬಿನ್ ನಲ್ಲಿದ್ದ ಬ್ಯಾಗ್ ಹೊರಗೆಳೆಯಲು ಕಷ್ಟಪಡುತ್ತಿದ್ದ ಯುವತಿಯರನ್ನು ನೋಡಿ ರಾಹುಲ್ ಸ್ವತಃ ತಾವೇ ಎದ್ದು ನಿಂತು ಮಹಿಳೆಯರಿಗೆ ಬ್ಯಾಗ್ ಹೊರಗೆಳೆದು ತೆಗೆಯಲು ಸಹಾಯ ಮಾಡಿದ್ದಾರೆ. ಕಾಂಗ್ರೆಸ್ ಯುವರಾಜನ ಈ ಕೆಲಸ ನೋಡಿ ಅಲ್ಲಿದ್ದವರೆಲ್ಲಾ ಅಚ್ಚರಿಪಟ್ಟುಕೊಂಡಿದ್ದಾರೆ. ಆ ಫೋಟೋಗಳು ಇದೀಗ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಭಾರೀ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ