Select Your Language

Notifications

webdunia
webdunia
webdunia
webdunia

ಲೋಕಸಭೆಯಲ್ಲಿ ಪ್ರಿಯಾಂಕ ವಾದ್ರಾ ಚೊಚ್ಚಲ ಭಾಷಣಕ್ಕೆ ಫುಲ್ ಮಾರ್ಕ್ಸ್‌ ಕೊಟ್ಟ ರಾಹುಲ್ ಗಾಂಧಿ

Leader of Opposition Rahul Gandhi, Congress leader Priyanka Gandhi Vadra,  Priyanka Gandhi Vadra Speech

Sampriya

ನವದೆಹಲಿ , ಶುಕ್ರವಾರ, 13 ಡಿಸೆಂಬರ್ 2024 (18:07 IST)
Photo Courtesy X
ನವದೆಹಲಿ: ಶುಕ್ರವಾರ ಲೋಕಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಅವರ ಭಾಷಣವನ್ನು ಶ್ಲಾಘಿಸಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವರು ಇದು ನನ್ನ ಸದನದಲ್ಲಿ ಅವರ ಚೊಚ್ಚಲ ಭಾಷಣಕ್ಕಿಂತ  ಉತ್ತಮವಾಗಿದೆ ಎಂದು ಸಹೋದರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 ಸಂಭಾಲ್ ಮತ್ತು ಮಣಿಪುರದಲ್ಲಿ ನಡೆದ ಹಿಂಸಾಚಾರದ ಘಟನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಚೇತರಿಸಿಕೊಂಡಿಲ್ಲ ಮತ್ತು ಸಂವಿಧಾನವು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನಿಯಮ ಪುಸ್ತಕವಲ್ಲ ಎಂದು ಅರ್ಥಮಾಡಿಕೊಂಡಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

ಲೋಕಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಕೇರಳದ ವಯನಾಡಿನ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಸಂವಿಧಾನವು ನ್ಯಾಯ, ಏಕತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣಾತ್ಮಕ ಗುರಾಣಿಯಾಗಿದೆ, ಆದರೆ ಬಿಜೆಪಿ ನೇತೃತ್ವದ ಸರ್ಕಾರವು ಅದನ್ನು ಮುರಿಯಲು ಎಲ್ಲ ಪ್ರಯತ್ನಗಳನ್ನು ಮಾಡಿದೆ ಎಂದು ಹೇಳಿದರು.

ಇದೀಗ ಲೋಕಸಭೆಯಲ್ಲಿ ಸಹೋದರಿಯ ಭಾಷಣದ ಬಗ್ಗೆ ರಾಹುಲ್ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಪ್ರಿಯಾಂಕಾ ಅವರದ್ದು ಅದ್ಭುತ ಭಾಷಣ.... ನನ್ನ ಚೊಚ್ಚಲ ಭಾಷಣಕ್ಕಿಂತ ಉತ್ತಮವಾಗಿದೆ ಎಂದು ಪ್ರಶಂಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Priyanka Vadra: ಮೊದಲ ಭಾಷಣದಲ್ಲೇ ಮೋದಿಗೆ ಚುಚ್ಚಿದ ಪ್ರಿಯಾಂಕ ವಾದ್ರಾ (video)