ನವದೆಹಲಿ: ಬೆಂಗಳೂರಿನಲ್ಲಿ ಪತ್ನಿಯ ವರದಕ್ಷಿಣೆ ಕಿರುಕುಳ ಕೇಸ್ ನಿಂದ ಹೈರಾಣಾಗಿ ಆತ್ಮಹತ್ಯೆ ಮಾಡಿಕೊಂಡ ಟೆಕಿ ಅತುಲ್ ಸುಭಾಷ್ ಪ್ರಕರಣದ ನಂತರ ವಿಚ್ಛೇದನ ಪ್ರಕರಣ ಇತ್ಯರ್ಥಕ್ಕೆ ಸುಪ್ರೀಂಕೋರ್ಟ್ ಮಹತ್ವದ 8 ಸೂತ್ರಗಳನ್ನು ಅಳವಡಿಸಲು ಸೂಚಿಸಿದೆ.
ದೇಶದ ಎಲ್ಲಾ ಕೋರ್ಟ್ ಗಳಿಗೆ ಅನ್ವಯವಾಗುವಂತೆ ಈ ಆದೇಶ ನೀಡಲಾಗಿದೆ. ಪತಿ-ಪತ್ನಿ ಕಲಹ ಪ್ರಕರಣದಲ್ಲಿ ಶಾಶ್ವತ ಜೀವನಾಂಶವನ್ನು ನಿರ್ಧರಿಸುವ ವೇಳೆ ನ್ಯಾಯಾಲಯಗಳು ಈ ಎಂಟು ಮಾರ್ಗಸೂಚಿಗಳನ್ನು ಅನುಸರಿಸಲು ಆದೇಶ ನೀಡಲಾಗಿದೆ. ಇದರಿಂಧ ಪುರುಷರಿಗೂ ಅನ್ಯಾಯವಾಗದಂತೆ ತಡೆಯಬಹುದಾಗಿದೆ.
ವಿಚ್ಛೇದನ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾ. ವಿಕ್ರಮ್ ನಾಥ್ ಮತ್ತು ನ್ಯಾ. ಪ್ರಸನ್ನ ಬಿ. ವರಾಳೆ ಅವರನ್ನೊಳಗೊಂದು ನ್ಯಾಯಪೀಠ ಈ ತೀರ್ಪು ನೀಡಿದೆ. ದೇಶದ ಎಲ್ಲಾ ನ್ಯಾಯಾಲಯಗಳೂ ಜೀವನಾಂಶ ಮೊತ್ತವನ್ನು ನಿರ್ಧರಿಸುವಾಗ ಈ ಸೂತ್ರಗಳನ್ನು ಪಾಲಿಸಬೇಕಾಗುತ್ತದೆ.
ಮಾರ್ಗಸೂಚಿಗಳೇನು
-
ಎರಡೂ ಕಡೆಯವರ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನ ತಿಳಿಯಬೇಕು
-
ಪತ್ನಿ ಮತ್ತು ಮಕ್ಕಳ ಅಗತ್ಯತೆ ತಿಳಿದುಕೊಳ್ಳಬೇಕು
-
ಪತ್ನಿ ಮತ್ತು ಪತಿಯ ಉದ್ಯೋಗ ಮತ್ತು ವಿದ್ಯಾರ್ಹತೆ ತಿಳಿದುಕೊಳ್ಳಬೇಕು
-
ಅರ್ಜಿದಾರರ ಆದಾಯ, ಆಸ್ತಿ ಪರಿಗಣಿಸಬೇಕು
-
ಪತಿಯ ಮನೆಯಲ್ಲಿ ಪತ್ನಿಯ ಜೀವನಮಟ್ಟ ಹೇಗಿದೆ ಎಂದು ತಿಳಿದುಕೊಳ್ಳಬೇಕು
-
ಕೌಟುಂಬಿಕ ಜವಾಬ್ಧಾರಿ ಕಾರಣ ನೌಕರಿ ತೊರೆದಿದ್ದಾರೆಯೇ ಎಂದು ತಿಳಿದುಕೊಳ್ಳಬೇಕು
-
ಪತ್ನಿ ಉದ್ಯೋಗಸ್ಥೆ ಅಲ್ಲದೇ ಇದ್ದರೆ ಕಾನೂನು ಹೋರಾಟದ ವೆಚ್ಚ ಭರಿಸಬೇಕು
-
ಪತಿಯ ಆರ್ಥಿಕ ಸಾಮರ್ಥ್ಯ, ಆದಾಯ, ಭಾದ್ಯತೆಗಳನ್ನು ತಿಳಿದುಕೊಳ್ಳಬೇಕು