ಹರಿಯಾಣ: ಜುಲಾನಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ವಿನೇಶ್ ಫೋಗಟ್ ಪರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಾತನಾಡುವ ವೇಳೆ ಯಡವಟ್ಟು ಮಾಡಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಅವರು ಪದಕ ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಹೇಳುವ ಮೂಲಕ ದೊಡ್ಡ ಯಡವಟ್ಟು ಮಾಡಿಕೊಂಡಿದ್ದಾರೆ.
ಹರಿಯಾಣ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಪ್ರಿಯಾಂಕ ಗಾಂಧಿಗೆ ವಿನೇಶ್ ಫೋಗಟ್ ಭವ್ಯವಾದ ಸ್ವಾಗತವನ್ನು ನೀಡಿದರು. ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, ಒಂದು ಮಗು ದೇಶಕ್ಕಾಗಿ, ಪರದೇಶದಲ್ಲಿ ಆಟವಾಡಿ ಹೋರಾಡಿದೆ. ಅವರು ಗೆದ್ದರೆ ಇಡೀ ರಾಷ್ಟ್ರವು ಹೆಮ್ಮೆಪಡುತ್ತದೆ, ಆದ್ದರಿಂದ ಅವರ ರಕ್ಷಣೆಯೇ ಪೋಷಕರ ಆಶಯವಾಗಿದೆ.
ವಿನೇಶ್ ವಿಷಯದಲ್ಲೂ ಅದೇ ಆಯಿತು. ಆಕೆಯ ಪೋಷಕರು ಅವಳನ್ನು ಪೂರ್ಣ ಸಂಕಲ್ಪದಿಂದ ಕಳುಹಿಸಿದರು, ಅವರು ಹೋರಾಡಿದರು, ಹೋರಾಡಿದರು ಮತ್ತು ಒಲಿಂಪಿಕ್ಸ್ ತಲುಪಿದರು. ಅವಳು ತನ್ನ ಕಠಿಣ ಪರಿಶ್ರಮದ ಫಲವಾಗಿ ಪದಕವನ್ನು ಪಡೆದಳು. ಡೀ ದೇಶವು ಹೆಮ್ಮೆ ಮತ್ತು ಸಂತೋಷವನ್ನು ಅನುಭವಿಸಿತು ಎಂದು ಹೇಳುವ ಮೂಲಕ ಯಡವಿದ್ದಾರೆ.
ವಿನೇಶ್ ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್ ಫೈನಲ್ ಕುಸ್ತಿ ಸ್ಪರ್ಧೆಗೂ ಮುನ್ನಾ ನಿಗದಿತ ತೂಕಕ್ಕಿಂತ 100ಗ್ರಾಂ ಜಾಸ್ತಿ ಇದ್ದಿದ್ದರಿಂದ ಅವರನ್ನು ಅನರ್ಹ ಮಾಡಲಾಹಿತು. ಈ ವಿಚಾರವಾಗಿ ಇಡೀ ದೇಶವೇ ವಿನೇಶ್‌ಗೆ ಧೈರ್ಯ ತುಂಬಿತ್ತು. ಆದರೆ ಈ ವಿಚಾರದಲ್ಲಿ ಪ್ರಿಯಾಂಗಾ ಗಾಂಧಿ ಅವರು ಯಡವಟ್ಟು ಮಾಡುವ ಮೂಲಕ ಇದೀಗ ಟೀಕೆಗೆ ಗುರಿಯಾಗಿದ್ದಾರೆ.