Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಈ ಕ್ರೀಡೆಯಲ್ಲಿ ಚಾಂಪಿಯನ್ ಅಂತೆ!

ರಾಹುಲ್ ಗಾಂಧಿ ಈ ಕ್ರೀಡೆಯಲ್ಲಿ ಚಾಂಪಿಯನ್ ಅಂತೆ!
ನವದೆಹಲಿ , ಶನಿವಾರ, 28 ಅಕ್ಟೋಬರ್ 2017 (08:15 IST)
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜಕೀಯ ಜೀವನದ ಬಗ್ಗೆ ಮಾತ್ರ ಜನರಿಗೆ ಗೊತ್ತು. ಆದರೆ ಅವರ  ಇನ್ನೊಂದು ಮುಖ ಕಾರ್ಯಕ್ರಮವೊಂದರಲ್ಲಿ ಅನಾವರಣಗೊಂಡಿದೆ.

 
ಪಿಚ್ ಡಿ ಚೇಂಬರ್ಸ್ ಆಫ್ ಕಾಮರ್ಸ್ ವಾರ್ಷಿಕ ಸಮಾರಂಭದಲ್ಲಿ ಬಾಕ್ಸರ್ ವಿಜೇಂದರ್ ಸಿಂಗ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ನನಗೂ ಕ್ರೀಡೆ ಎಂದರೆ ತುಂಬಾ ಇಷ್ಟ. ಜಪಾನೀಸ್ ಮಾರ್ಷಲ್ ಆರ್ಟ್ ಅಕಿಡೋದಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದೇನೆ ಎಂದಿದ್ದಾರೆ.

‘ದಿನಕ್ಕೆ ಒಂದು ಗಂಟೆಯಾದರೂ ನಾನು ಕ್ರೀಡೆ, ವ್ಯಾಯಾಮದಲ್ಲಿ ಕಳೆಯುತ್ತೇನೆ. ಕ್ರೀಡೆ ಎಂದರೆ ನನಗೆ ತುಂಬಾ ಇಷ್ಟ. ಅಕಿಡೋದಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದೇನೆ. ಆದರೆ ಇದನ್ನು ಹೆಚ್ಚು ಸಾರ್ವಜನಿಕವಾಗಿ ಹೇಳಿಕೊಳ್ಳಲ್ಲ’ ಎಂದು ಕಾಂಗ್ರೆಸ್ ಯುವರಾಜ ತಮ್ಮ ಮತ್ತೊಂದು ಮುಖದ ಅನಾವರಣ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ರಾಜೀನಾಮೆ ನೀಡದಿದ್ರೆ ರಾಜ್ಯದಾದ್ಯಂತ ಹೋರಾಟ: ಬಿಎಸ್‌ವೈ ಎಚ್ಚರಿಕೆ