Select Your Language

Notifications

webdunia
webdunia
webdunia
webdunia

ಮೋದಿ ಅಲೆ ಅಂತ್ಯ, ರಾಹುಲ್‌ಗೆ ದೇಶ ಮುನ್ನಡೆಸುವ ಸಾಮರ್ಥ್ಯವಿದೆ: ಶಿವಸೇನೆ

ಮೋದಿ ಅಲೆ ಅಂತ್ಯ, ರಾಹುಲ್‌ಗೆ ದೇಶ ಮುನ್ನಡೆಸುವ ಸಾಮರ್ಥ್ಯವಿದೆ: ಶಿವಸೇನೆ
ಮುಂಬೈ , ಶುಕ್ರವಾರ, 27 ಅಕ್ಟೋಬರ್ 2017 (12:56 IST)
ಮಹಾರಾಷ್ಟ್ರದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿರುವ ಶಿವಸೇನೆ ಸದಾ ತನ್ನದೇ ಮಿತ್ರಪಕ್ಷವನ್ನೇ ಟೀಕಿಸುತ್ತಿರುವುದು ಬಿಜೆಪಿಗೆ ಆಕ್ರೋಶ ಉಂಟು ಮಾಡಿದೆ. 
ಪ್ರಧಾನಿ ಮೋದಿಯ ಮಾಂತ್ರಿಕ ಅಲೆ ಅಂತ್ಯವಾಗಿದ್ದು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಶಿವಸೇನೆ ಹೇಳಿಕೆ ನೀಡಿದೆ.
 
ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶಿವಸೇನೆ ಸಂಸದ ಸಂಜಯ್ ರಾವುತ್, ರಾಹುಲ್ ಗಾಂಧಿ ತುಂಬಾ ಪ್ರಬುದ್ಧರಾಗಿದ್ದಾರೆ. ಅವರಿಗೆ ದೇಶವನ್ನು ಆಳಉವ ಸಾಮರ್ಥ್ಯವಿದೆ ಎಂದು ತಿಳಿಸಿದ್ದಾರೆ.
 
ಅಪೂರ್ಣವಾಗಿರುವ ಜಿಎಸ್‌ಟಿಯನ್ನು ಜಾರಿಗೆ ತಂದ ಮೋದಿ ಸರಕಾರದ ಕ್ರಮ ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ. ಜಿಎಸ್‌ಟಿ ಜಾರಿಯಿಂದಾಗಿ ಸಣ್ಣ ಮತ್ತು ಮಧ್ಯಮ ವರ್ತಕರು ಕಂಗಾಲಾಗಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದರಿಂದ ದೇಶಾದ್ಯಂತ ಮೋದಿ ಸರಕಾರದ ವಿರುದ್ಧದ ಅಲೆ ಆರಂಭವಾಗಿದೆ ಎಂದು ಕಾರಣ ನೀಡಿದ್ದಾರೆ.
 
ಮುಂಬರುವ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಗುಜರಾತ್, ಹಿಮಾಚಲ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿಪಕ್ಷಗಳಿಂದ ತೀವ್ರ ಸವಾಲ್ ಎದುರಿಸಬೇಕಾಗಿದೆ ಬಂದಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ಗುಡುಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಬಿಐ ಎಫ್‌ಐಆರ್ ವಿವರಗಳು ಲಭ್ಯವಾಗಿಲ್ಲ: ಸಿಎಂ ಸಿದ್ದರಾಮಯ್ಯ