Publish Date: Tue, 12 May 2026 (11:41 IST)
Updated Date: Tue, 12 May 2026 (11:46 IST)
ಬೆಂಗಳೂರು: ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಕರೆ ನೀಡಿದರೆ ಅದು ಆರ್ಥಿಕ ನೀತಿ, ಅದೇ ಮೋದಿ ಜೀ ಕರೆ ನೀಡಿದರೆ ಅದು ತಪ್ಪು ಎಂದು ಕಾಂಗ್ರೆಸ್ ದೂಷಿಸುತ್ತದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ಚಿನ್ನ ಖರೀದಿಸಬೇಡಿ ಎಂದು ಕರೆ ನೀಡಿದ್ದಕ್ಕೆ ಕಾಂಗ್ರೆಸ್ ಟೀಕೆ ಮಾಡಿತ್ತು. ಇದಕ್ಕೆ ಆರ್ ಅಶೋಕ್ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ಸಿಗರ ಆರ್ಥಿಕ ಅಜ್ಞಾನ ಮತ್ತು ಅಂಧ ವಿರೋಧಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ?
ಇತಿಹಾಸದ ಅರಿವೂ ಇಲ್ಲದ, ಆರ್ಥಿಕ ನಿರ್ವಹಣೆಯ ಗಂಧ-ಗಾಳಿಯೂ ಗೊತ್ತಿಲ್ಲದ ಇಂದಿನ ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಪ್ರತಿಯೊಂದು ನಡೆಯನ್ನೂ ವಿರೋಧಿಸುವುದೇ ಒಂದು ನಿತ್ಯ ಕಾಯಕವಾಗಿಬಿಟ್ಟಿದೆ. ರಾಷ್ಟ್ರದ ಹಿತದೃಷ್ಟಿಯಿಂದ ಮೋದಿ ಅವರು ನೀಡುವ ದೂರದೃಷ್ಟಿಯ ಆರ್ಥಿಕ ಸಲಹೆಗಳನ್ನು ಲೇವಡಿ ಮಾಡುವ ಈ ಕಾಂಗ್ರೆಸ್ಸಿಗರು ಒಮ್ಮೆ ತಮ್ಮದೇ ಪಕ್ಷದ ಇತಿಹಾಸವನ್ನು ತಿರುವಿ ಹಾಕಲಿ.
1967 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ಆರ್ಥಿಕ ಶಿಸ್ತಿಗಾಗಿ 'ಚಿನ್ನ ಕೊಳ್ಳಬೇಡಿ' ಎಂದು ಜನರಲ್ಲಿ ಮನವಿ ಮಾಡಿದ್ದರು.
2013 ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿದ್ದಾಗ ಹಣಕಾಸು ಸಚಿವ ಪಿ. ಚಿದಂಬರಂ ಅವರು ಚಾಲ್ತಿ ಖಾತೆ ಕೊರತೆ (CAD) ಸರಿದೂಗಿಸಲು 'ಚಿನ್ನದ ಮೇಲಿನ ವ್ಯಾಮೋಹ ಬಿಡಿ' ಎಂದು ಪದೇ ಪದೇ ಗೋಗರೆದಿದ್ದರು.
'ದೊರೆ ಮಾಡಿದರೆ ದಂಡವಿಲ್ಲ' ಎಂಬಂತೆ, ಇಂದಿರಾ ಗಾಂಧಿ ಅಥವಾ ಸೋನಿಯಾ ಗಾಂಧಿ ಅವರ ಕಾಲದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರಗಳು ಕರೆ ನೀಡಿದರೆ ಅದು "ಆರ್ಥಿಕ ನೀತಿ".
ಆದರೆ ರಾಷ್ಟ್ರದ ಹಿತದೃಷ್ಟಿಯಿಂದ ಮೋದಿ ಅವರು ಕರೆ ನೀಡಿದರೆ ಅದು ಇವರಿಗೆ ತಪ್ಪಾಗಿ
ಕಾಣುತ್ತಿರುವುದು ಕಾಂಗ್ರೆಸ್ ನಾಯಕರ ಎಡಬಿಡಂಗಿತನಕ್ಕೆ ಹಿಡಿದ ಕನ್ನಡಿ.
ಕೇವಲ ರಾಜಕೀಯ ಕಾರಣಕ್ಕಾಗಿ ದೇಶದ ಆರ್ಥಿಕತೆಯ ಬಗ್ಗೆ ಯಾವುದೇ ತರ್ಕವಿಲ್ಲದೆ ಮಾತನಾಡುವ ಕಾಂಗ್ರೆಸ್ ನಾಯಕರು ಮೊದಲು ಆರ್ಥಿಕತೆಯ ಮೂಲಪಾಠಗಳನ್ನು ಕಲಿಯಲಿ. ಮೋದಿಯವರನ್ನು ವಿರೋಧಿಸುವ ಭರದಲ್ಲಿ ದೇಶದ ಹಿತವನ್ನು ಬಲಿ ಕೊಡಬೇಡಿ ಎಂದಿದ್ದಾರೆ.
ಒಂದು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು, ಹೆಚ್ಚು ಸೇವಿಸಿದರೆ ಏನಾಗುತ್ತದೆ
ಸಕ್ಕರೆ ಸೇವನೆ ದುಷ್ಪರಿಣಾಮಗಳು, ಸಕ್ಕರೆ ಸೇವಿಸಬೇಕಾದ ಪ್ರಮಾಣ, ಆರೋಗ್ಯ ಟಿಪ್ಸ್
ಆಧುನಿಕ ಜೀವನಶೈಲಿಯಲ್ಲಿ ಸಕ್ಕರೆಯು ನಮ್ಮ ಆಹಾರದ ಅವಿಭಾಜ್ಯ ಅಂಗವಾಗಿದೆ. ಆದರೆ "ಅತಿಯಾದರೆ ಅಮೃತವೂ ವಿಷ" ಎಂಬಂತೆ, ಸಕ್ಕರೆಯ ಅತಿಯಾದ ಸೇವನೆಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ದಾರಿಯಾಗುತ್ತದೆ. ಹಾಗಾದರೆ ಒಬ್ಬ ವ್ಯಕ್ತಿಯು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಅಮೇರಿಕನ್ ಹಾರ್ಟ್ ಅಸೋಸಿಯೇಷನ್ (AHA) ನೀಡಿರುವ ಮಾರ್ಗಸೂಚಿಗಳ ಪ್ರಕಾರ ಪುರುಷರು 36 ಗ್ರಾಂ, ಮಹಿಳೆಯರು 25 ಗ್ರಾಂ, 2-18 ವರ್ಷದೊಳಗಿನ ಮಕ್ಕಳು 25 ಗ್ರಾಂಗಿಂತ ಕಡಿಮೆ ಸಕ್ಕರೆ ಸೇವನೆ ಮಾಡಬೇಕು. 2 ವರ್ಷದೊಳಗಿನ ಮಕ್ಕಳಿಗೆ ಸಕ್ಕರೆ ನೀಡಲೇಬಾರದು.
ಹೆಚ್ಚು ಸಕ್ಕರೆ ಸೇವನೆಯಿಂದಾಗುವ ದುಷ್ಪರಿಣಾಮಗಳು
ತೂಕ ಹೆಚ್ಚಳ (Obesity): ಸಕ್ಕರೆಯು ಕೇವಲ ಕ್ಯಾಲೋರಿಗಳನ್ನು ನೀಡುತ್ತದೆ ಹೊರತು ಯಾವುದೇ ಪೋಷಕಾಂಶಗಳನ್ನಲ್ಲ. ಇದು ದೇಹದಲ್ಲಿ ಕೊಬ್ಬು ಸಂಗ್ರಹವಾಗಲು ಕಾರಣವಾಗುತ್ತದೆ.
ಮಧುಮೇಹ (Diabetes): ಅತಿಯಾದ ಸಕ್ಕರೆ ಸೇವನೆಯಿಂದ ಇನ್ಸುಲಿನ್ ಪ್ರತಿರೋಧ ಉಂಟಾಗಿ ಟೈಪ್-2 ಡಯಾಬಿಟಿಸ್ ಬರುವ ಸಾಧ್ಯತೆ ಹೆಚ್ಚುತ್ತದೆ.
ಹೃದಯ ಸಂಬಂಧಿ ಕಾಯಿಲೆ: ಅಧಿಕ ಸಕ್ಕರೆಯು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿ ಹೃದಯಾಘಾತದ ಅಪಾಯವನ್ನು ತಂದೊಡ್ಡುತ್ತದೆ.
ಹಲ್ಲಿನ ಸಮಸ್ಯೆ: ಸಕ್ಕರೆಯು ಬಾಯಿಯಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಕಾರಿ, ಇದು ಹಲ್ಲು ಹುಳುಕಾಗಲು ಪ್ರಮುಖ ಕಾರಣ.
ಚರ್ಮದ ಮೇಲೆ ಪ್ರಭಾವ: ಅತಿಯಾದ ಸಿಹಿ ಸೇವನೆಯಿಂದ ಮೊಡವೆಗಳು ಮತ್ತು ವಯಸ್ಸಾದ ಲಕ್ಷಣಗಳು (ಸುಕ್ಕುಗಳು) ಬೇಗನೆ ಕಾಣಿಸಿಕೊಳ್ಳುತ್ತವೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ