Daily Horoscope

Select Your Language

Notifications

webdunia
webdunia
webdunia
webdunia

ಚಿನ್ನ ಖರೀದಿಸಬೇಡಿ, ವರ್ಕ್ ಫ್ರಂ ಹೋಂ ಮಾಡಿ ಎಂದು ಪ್ರಧಾನಿ ಮೋದಿ ಘೋಷಿಸಿರುವ ರಹಸ್ಯವೇನು

PM Modi in AI Summit
ನವದೆಹಲಿ: ಮುಂದಿನ ಒಂದು ವರ್ಷದವರೆಗೆ ಚಿನ್ನ ಖರೀದಿ ಮಾಡಬೇಡಿ, ಕಾರ್ ಪೂಲಿಂಗ್ ಮಾಡಿ, ವರ್ಕ್ ಫ್ರಮ್ ಹೋಂ ಮಾಡಿ ಎಂದು ಪ್ರಧಾನಿ ಮೋದಿ ನೀಡಿದ ಹೇಳಿಕೆ ವಿಪಕ್ಷಗಳ ಟೀಕೆಗೆ ಗುರಿಯಾಗಿರಬಹುದು. ಆದರೆ ಹಿಂದಿರುವ ರಹಸ್ಯವೇ ಬೇರೆ.

ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡುವಾಗ ಮುಂದಿನ ಒಂದು ವರ್ಷದವರೆಗೆ ಅನಗತ್ಯವಾಗಿ ಚಿನ್ನ ಖರೀದಿಸಬೇಡಿ, ಕಂಪನಿಗಳು ವರ್ಕ್ ಫ್ರಮ್ ಹೋಂ ಮಾಡುವುದರತ್ತ ಗಮನ ಹರಿಸಬೇಕು. ಕಾರ್ ಪೂಲಿಂಗ್ ಮಾಡಿ, ಆದಷ್ಟು ಸಾರ್ವಜನಿಕ ಸಾರಿಗೆ ಬಳಸಿ ಎಂದು ಕರೆ ನೀಡಿದ್ದರು.

ಅವರ ಹೇಳಿಕೆಗೆ ವಿಪಕ್ಷಗಳು ಭಾರೀ ಟೀಕೆ ವ್ಯಕ್ತಪಡಿಸಿದ್ದವು. ಇದು ದೇಶ ದಿವಾಳಿಯಾಗುತ್ತಿರುವುದರ ಸೂಚನೆ. ದೇಶ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಇದಕ್ಕೆ ಮೋದಿ ಹೀಗೆಲ್ಲಾ ನಾಟಕ ಮಾಡುತ್ತಿದ್ದಾರೆ ಎಂದು ವಿಪಕ್ಷಗಳು ವಾಗ್ದಾಳಿ ನಡೆಸಿವೆ.

ಆದರೆ ಮೋದಿ ಈ ರೀತಿ ಸಲಹೆ ನೀಡಿರುವುದರ ಹಿಂದೆ ಒಂದು ಕಾರಣವೂ ಇದೆ. ಸದ್ಯಕ್ಕೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ಕಾರಣದಿಂದ ಬಹುತೇಕ ರಾಷ್ಟ್ರಗಳು ಆರ್ಥಿಕ ಸಂಕಷ್ಟಕ್ಕೀಡಾಗಿವೆ. ಕೆಲವು ದೇಶಗಳಲ್ಲಂತೂ ಪೆಟ್ರೋಲ್, ಡೀಸೆಲ್  ಬೆಲೆ ಮಿತಿ ಮೀರಿದೆ. ರೂಪಾಯಿ ಎದುರು ಡಾಲರ್  ವಿಪರೀತ ಏರಿಕೆಯಾಗಿದೆ.

ಆದರೆ ಭಾರತದಲ್ಲಿ ಇಂಧನ ದರ ಯಥಾಸ್ಥಿತಿಯಲ್ಲಿದೆ. ಬೇಋಎ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪರಿಸ್ಥಿತಿ ಅಷ್ಟೊಂದು ಹದಗೆಟ್ಟಿಲ್ಲ. ಆದರೆ ಭಾರತವೂ ಹಲವು ವಸ್ತುಗಳಿಗೆ ವಿದೇಶಗಳನ್ನು ಅವಲಂಬಿಸಿಕೊಂಡಿದೆ. ಉದಾಹರಣೆಗೆ ಚಿನ್ನ, ಇಂಧನ ಇತ್ಯಾದಿಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತದೆ.

ನಮ್ಮ ದೇಶದಲ್ಲಿ ಜನ ಹೆಚ್ಚು ಚಿನ್ನ ಖರೀದಿ ಮಾಡಿದರೆ ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಆಗ ನಾವು ಡಾಲರ್ ರೂಪದಲ್ಲಿ ಹಣ ನೀಡಬೇಕು. ಇಂಧನದ್ದೂ ಇದೇ ಕತೆ. ಸದ್ಯಕ್ಕೆ ರೂಪಾಯಿ ಎದುರು ಡಾಲರ್ ಮೌಲ್ಯ ಭಾರೀ ಏರಿಕೆಯಾಗಿರುವುದರಿಂದ ನಮಗೆ ಈ ವಸ್ತುಗಳ ಆಮದು ಆರ್ಥಿಕತೆಗೆ ದೊಡ್ಡ ಹೊಡೆತ ನೀಡುತ್ತದೆ. ಇದರಿಂದ ದೇಶದ ಆರ್ಥಿಕ ಹೊರೆ ತಗ್ಗಬಹುದು ಎಂಬುದು ಮೋದಿ ಲೆಕ್ಕಾಚಾರ. ಇದೇ ಕಾರಣಕ್ಕೆ ಚಿನ್ನ ಖರೀದಿಸಬೇಡಿ, ವರ್ಕ್ ಫ್ರಮ್ ಹೋಂ ಮಾಡಿ ಎಂದು ಕರೆ ನೀಡಿದ್ದಾರೆ. ಮೋದಿ ಕರೆಗೆ ಓಗೊಟ್ಟು ಜನ ಅದನ್ನು ಪಾಲಿಸಿದರೆ ಕನಿಷ್ಠ 20% ವಾದರೂ ಆರ್ಥಿಕ ಹೊರೆ ತಪ್ಪುತ್ತದೆ ಎಂದು ಲೆಕ್ಕಾಚಾರ ಹಾಕಲಾಗಿದೆ. ಇದರಿಂದ ರೂಪಾಯಿ ಮೌಲ್ಯವೂ ಹೆಚ್ಚಾಗಲಿದೆ. ಜೊತೆಗೆ ದೇಶವನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಬಹುದು ಎಂಬ ಮುಂದಾಲೋಚನೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನಮೋಹನ್ ಸಿಂಗ್ ಕೊಡ್ತಿದ್ದಷ್ಟು ಅನುದಾನ ಕೊಡಿ ಎಂದ ರೇವಂತ್ ರೆಡ್ಡಿ, ಅದು ನಿಮ್ಮ ಖರ್ಚಿಗೂ ಸಾಲಲ್ಲ ಎಂದು ಕಾಲೆಳೆದ ಮೋದಿ Video