Publish Date: Sat, 09 May 2026 (08:28 IST)
Updated Date: Sat, 09 May 2026 (08:30 IST)
ಕೋಲ್ಕತ್ತಾ: ಪಶ್ಚಿಮ ಬಂಗಾಲದ ನೂತನ ಸಿಎಂ ಸುವೇಂದು ಅಧಿಕಾರಿ ಆಗಿ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿಯಲ್ಲಿ ಅವಿವಾಹಿತರಿಗೆ ಚಾನ್ಸ್ ಎಂದು ಪಬ್ಲಿಕ್ ಕಾಲೆಳೆದಿದ್ದಾರೆ.
ನಿನ್ನೆ ನಡೆದ ಶಾಸಕಾಂಗ ಸಭೆಯಲ್ಲಿ ಬಿಜೆಪಿ ನಾಯಕರು ಸುವೇಂದು ಅಧಿಕಾರಿಯನ್ನು ಸಿಎಂ ಎಂದು ಘೋಷಣೆ ಮಾಡಲಾಗಿದೆ. ಹಿಂದುತ್ವದ ಕಟ್ಟಾ ನಾಯಕ ಸುವೇಂದು ಅಧಿಕಾರಿ ಸಿಎಂ ಆಗಿ ಆಯ್ಕೆಯಾಗುತ್ತಿದ್ದಂತೇ ಜನರಿಂದ ಹಲವು ಅಭಿಪ್ರಾಯಗಳು ಕೇಳಿಬಂದಿದೆ.
ಅದರಲ್ಲೂ ವಿಶೇಷವಾಗಿ ಸುವೇಂದು ಅಧಿಕಾರಿ ಕೂಡಾ ಬಿಜೆಪಿಯ ಪ್ರಮುಖ ನಾಯಕರಂತೆ ಅವಿವಾಹಿತ ಎನ್ನುವುದು ಎಲ್ಲರ ಗಮನ ಸೆಳೆದಿದೆ. 2021 ರಲ್ಲಿ ಘೋಷಿಸಿಕೊಂಡಿರುವ ಪ್ರಕಾರ ತಮ್ಮ ರಾಜಕೀಯ ಜೀವನದಲ್ಲಿ ಗಮನ ಕೇಂದ್ರೀಕರಿಸಲು ಸುವೇಂದು ಮದುವೆ ಬಗ್ಗೆ ಯೋಚನೆ ಮಾಡಿಲ್ಲವಂತೆ.
ಈ ಹಿಂದೆ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯಿಂದ ಹಿಡಿದು ಈಗಿನ ಪ್ರಧಾನಿ ಮೋದಿವರೆಗೂ ಬಿಜೆಪಿಯಲ್ಲಿ ಅವಿವಾಹಿತರೇ ಪ್ರಮುಖ ಹುದ್ದೆ ವಹಿಸಿದ್ದಾರೆ. ಉತ್ತರ ಪ್ರದೇಶದ ಸಿಎಂ ಆಗಿರುವ ಯೋಗಿ ಆದಿತ್ಯನಾಥ್ ಕೂಡಾ ಅವಿವಾಹಿತರು. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿಯಲ್ಲಿ ಅವಿವಾಹಿತರಿಗೆ ಚಾನ್ಸ್ ಎಂದು ಕಾಲೆಳೆದಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ