Publish Date: Thu, 07 May 2026 (20:05 IST)
Updated Date: Thu, 07 May 2026 (20:07 IST)
ಕೋಲ್ಕತ್ತಾ: ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಎಂದ ಮಮತಾ ಬ್ಯಾನರ್ಜಿಗೆ ಪಶ್ಚಿಮ ಬಂಗಾಲ ರಾಜ್ಯಪಾಲರು ಶಾಕ್ ಕೊಟ್ಟಿದ್ದಾರೆ.
ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಲ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಟಿಎಂಸಿ ಸೋತಿದ್ದು ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೇರಲು ಹೊರಟಿದೆ. ಆದರೆ ಬಿಜೆಪಿ ಗೆಲುವು ನ್ಯಾಯಯುತವಾಗಿಲ್ಲ. ಚುನಾವಣಾ ಆಯೋಗವನ್ನು ಬಳಸಿ ಅಕ್ರಮವಾಗಿ ಗೆದ್ದಿದೆ ಎಂದು ಮಮತಾ ಆರೋಪವಾಗಿದೆ.
ಹೀಗಾಗಿ ಸೋಲು ಒಪ್ಪಿಕೊಳ್ಳಲು ರೆಡಿಯಿರದ ಮಮತಾ ಸಿಎಂ ಸ್ಥಾನಕ್ಕೂ ರಾಜೀನಾಮೆ ಕೊಡಲ್ಲ ಎಂದಿದ್ದರು. ಆದರೆ ಈಗ ರಾಜ್ಯಪಾಲ ಆರ್ ಎನ್ ರವಿ ಶಾಸಕಾಂಗ ಸಭೆಯನ್ನೇ ಅಮಾನತುಗೊಳಿಸಿದೆ. ಇದರೊಂದಿಗೆ ಮಮತಾ ಕೂಡಾ ಅಧಿಕಾರ ಕಳೆದುಕೊಂಡಿದ್ದಾರೆ.
ಸಾಮಾನ್ಯವಾಗಿ ಯಾವುದೇ ಆಡಳಿತಾರೂಢ ಪಕ್ಷ ಚುನಾವಣೆ ಸೋತ ಬಳಿಕ ಸಿಎಂ ಆದವರು ತಾವಾಗಿಯೇ ರಾಜೀನಾಮೆ ಕೊಡುತ್ತಾರೆ. ಆದರೆ ಮಮತಾ ರಾಜೀನಾಮೇ ಕೊಡದ ಕಾರಣ ಮುಂದೆ ಗವರ್ನರ್ ಯಾವ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಎಲ್ಲರಲ್ಲಿ ಕುತೂಹಲವಿತ್ತು. ಅದಕ್ಕೀಗ ತೆರೆ ಬಿದ್ದಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ