Publish Date: Wed, 06 May 2026 (12:38 IST)
Updated Date: Wed, 06 May 2026 (12:41 IST)
ಕೋಲ್ಕತ್ತಾ: ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಗೆದ್ದು ಅಧಿಕಾರಕ್ಕೆ ಏರುವ ಮೊದಲೇ ಮಮತಾ ಬ್ಯಾನರ್ಜಿ ಅಧಿಕಾರವಧಿಯಲ್ಲಿ ನೇಮಿಸಿದ್ದ ನಿಯಮ ಮೀರಿದ ಸರ್ಕಾರೀ ಅಧಿಕಾರಿಗಳಿಗೆ ಗೇಟ್ ಪಾಸ್ ನೀಡಲಾಗಿದೆ. ಮಮತಾ ನಿವಾಸದ ರಸ್ತೆಯೂ ಜನರಿಗೆ ಮುಕ್ತವಾಗಿದೆ.
ಪಶ್ಚಿಮ ಬಂಗಾಲ ಚುನಾವಣೆಯಲ್ಲಿ ಪ್ರಚಂಡ ಬಹುಮತ ಗಳಿಸಿರುವ ಬಿಜೆಪಿ ಇದೀಗ ಸರ್ಕಾರ ರಚನೆಯ ಹೊಸ್ತಿಲಲ್ಲಿದೆ. ಇನ್ನು ಮೂರು ದಿನಗಳಲ್ಲಿ ಹೊಸ ಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎನ್ನಲಾಗಿದೆ. ಇದರ ನಡುವೆ ಸರ್ಕಾರೀ ಕಚೇರಿಗಳಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ.
ಮಮತಾ ಅಧಿಕಾರಾವಧಿಯಲ್ಲಿ ನೇಮಿಸಿದ್ದ ಕೆಲವು ಅಧಿಕಾರಿಗಳು ನಿವೃತ್ತಿ ಸಮಯವಾದರೂ ಕರ್ತವ್ಯಕ್ಕೆ ಬರುತ್ತಿದ್ದಾರೆ. ಅಂತಹ ಅಧಿಕಾರಿಗಳಿಗೆಲ್ಲಾ ಇಂದಿನಿಂದ ಗೇಟ್ ಪಾಸ್ ನೀಡಲಾಗಿದೆ. ನಿವೃತ್ತಿಯಾದ ಅಧಿಕಾರಿಗಳು ಇನ್ನು ಕರ್ತವ್ಯಕ್ಕೆ ಹಾಜರಾಗಬಾರದು ಎಂದು ಆದೇಶ ನೀಡಲಾಗಿದೆ. ಹೊಸ ಸರ್ಕಾರ ರಚನೆಯಾಗಿ ಈ ಅಧಿಕಾರಿಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳುವವರೆಗೂ ಕೆಲಸಕ್ಕೆ ಹಾಜರಾಗಬಾರದು ಎಂದು ಸೂಚಿಸಲಾಗಿದೆ.
ಇನ್ನು ಟಿಎಂಸಿ ಸೋಲುತ್ತಿದ್ದಂತೇ ಮಮತಾ ಬ್ಯಾನರ್ಜಿ ಮನೆಗೆ ನೀಡಲಾಗಿದ್ದ ಏಳು ಸುತ್ತಿನ ಕೋಟೆಯ ಭದ್ರತೆ ಹಿಂಪಡೆಯಲಾಗಿದೆ. ಇಷ್ಟು ದಿನ ಮಮತಾ ನಿವಾಸದ ಮುಂದಿನ ರಸ್ತೆಯಲ್ಲಿ ಸಂಚಾರಕ್ಕೆ ನಿರ್ಬಂಧವಿತ್ತು. ಆದರೆ ಈಗ ರಸ್ತೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ