Daily Horoscope

Select Your Language

Notifications

webdunia
webdunia
webdunia
webdunia

ಪಶ್ಚಿಮ ಬಂಗಾಲದ ಸಿಎಂ ಆಗುವ ಅವಕಾಶ ಮಿಸ್ ಮಾಡಿಕೊಂಡ್ರಾ ಸೌರವ್ ಗಂಗೂಲಿ

Sourav Ganguly
ಕೋಲ್ಕತ್ತಾ: ಎಲ್ಲಾ ಸರಿ ಹೋಗಿದ್ದರೆ ಸೌರವ್ ಗಂಗೂಲಿ ಈಗ ಬಿಜೆಪಿಯಿಂದ ಗೆದ್ದು ಪಶ್ಚಿಮ ಬಂಗಾಲದ ಸಿಎಂ ಆಗಬೇಕಿತ್ತು. ಆದರೆ ಅವರು ಆ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಂಡ್ರಾ? ಹೀಗೊಂದು ಚರ್ಚೆ ನಡೆಯುತ್ತಿದೆ.

ಪಶ್ಚಿಮ ಬಂಗಾಲ ಚುನಾವಣೆಗೆ ಬಿಜೆಪಿ ಕಳೆದ ಮೂರು ವರ್ಷಗಳಿಂದಲೂ ಹೋಂ ವರ್ಕ್ ಶುರು ಮಾಡಿಕೊಂಡಿತ್ತು. ಸ್ವತಃ ಅಮಿತ್ ಶಾ ಪಶ್ಚಿಮ ಬಂಗಾಲದ ಚುನಾವಣೆ ಹೊಣೆ ಹೊತ್ತುಕೊಂಡಿದ್ದರು. ಹಿಂದೊಮ್ಮೆ ಅಮಿತ್ ಶಾ ಕೋಲ್ಕತ್ತಾದಲ್ಲಿರುವ ಸೌರವ್ ಗಂಗೂಲಿ ಮನೆಗೆ ಭೇಟಿ ನೀಡಿದ್ದ ಘಟನೆ ನೆನಪಿರಬಹುದು.

ಆಗ ಇದೊಂದು ಸೌಹಾರ್ದಯುತ ಭೇಟಿ ಎಂದಿದ್ದರೂ ಅಮಿತ್ ಶಾಗೆ ಗಂಗೂಲಿಯನ್ನು ಬಿಜೆಪಿಯಿಂದ ಕಣಕ್ಕಿಳಿಸಿ ಪಶ್ಚಿಮ ಬಂಗಾಲದಲ್ಲಿ ದೀದಿಗೆ ಎದುರು ನಿಲ್ಲುವ ಒಬ್ಬ ಯುವ ಮತ್ತು ಸ್ವಚ್ಛ ಹಿನ್ನಲೆಯ ನಾಯಕ ಎಂದು ಬಿಂಬಿಸುವ ಇರಾದೆಯಿತ್ತು.

ಆದರೆ ಆಗ ಗಂಗೂಲಿ ರಾಜಕೀಯ ಬೇಡ ಎಂದು ಬಿಟ್ಟರು ಎನ್ನಲಾಗಿದೆ. ಒಂದು ವೇಳೆ ಗಂಗೂಲಿ ಅಂದು ಒಪ್ಪಿ ರಾಜಕೀಯಕ್ಕೆ ಬಂದಿದ್ದರೆ ಇಂದು ಬಿಜೆಪಿಯಿಂದ ಸಿಎಂ ಆಗುವ ಅವಕಾಶ ಪಡೆಯುತ್ತಿದ್ದರು ಎಂಬ ಚರ್ಚೆ ಈಗ ಜೋರಾಗಿ ಕೇಳಿಬರುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಸಲೀಲೆ ಪ್ರಕರಣವಿದ್ದರೂ DGP ರಾಮಚಂದ್ರ ರಾವ್ ನೇಮಕ: ತಪ್ಪು,ಸರಿ ಎಂದು ನಾನು ಹೇಳಕ್ಕೆ ಆಗಲ್ಲ ಎಂದ ಪರಮೇಶ್ವರ್