Select Your Language

Notifications

webdunia
webdunia
webdunia
webdunia

Karnataka Weather: ವಾರಂತ್ಯದಲ್ಲಿ ಕರ್ನಾಟಕದಲ್ಲಿ ಮಳೆಯಿದೆಯೇ ಇಲ್ಲಿದೆ ವಿವರ

Karnataka Weather
ಬೆಂಗಳೂರು: ರಾಜ್ಯಾದ್ಯಂತ ವಾರವಿಡೀ ಬೇಸಿಗೆ ಮಳೆಯ ಅಬ್ಬರ ಕಂಡುಬಂದಿತ್ತು. ವಾರಂತ್ಯಕ್ಕೆ ಮಳೆಯಿರಲಿದೆಯೇ ಇಲ್ಲಿದೆ ವಾರಂತ್ಯದ ಹವಾಮಾನ ವರದಿ.

ರಾಜ್ಯದಲ್ಲಿ ಉರಿಬಿಸಿಲಿನ ನಡುವೆಯೂ ಕೆಲವೆಡೆ ಮಳೆ ಕಂಡುಬರುತ್ತಿದೆ. ಈ ವಾರ ಬೆಂಗಳೂರು, ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಕಂಡುಬಂದಿತ್ತು. ಈ ವಾರಂತ್ಯಕ್ಕೆ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ವರದಿಗಳು ಸೂಚಿಸುತ್ತಿವೆ.

ಈ ವಾರಂತ್ಯಕ್ಕೆ ವಿಶೇಷವಾಗಿ ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಕೊಡಗು ಜಿಲ್ಲೆಗಳಲ್ಲಿ ವಾರಂತ್ಯಕ್ಕೆ ಭಾರೀ ಮಳೆಯಾಗುವ ಸೂಚನೆಯಿದೆ. ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಬೆಂಗಳೂರು, ಕೋಲಾರ, ತುಮಕೂರು, ಹಾವೇರಿ, ಚಿತ್ರದುರ್ಗ, ಕೊಪ್ಪಳ, ಶಿವಮೊಗ್ಗ, ಹುಬ್ಬಳ್ಳಿ, ದಾವಣಗೆರೆ, ಧಾರವಾಡ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದೆ.

ಉಳಿದ ಜಿಲ್ಲೆಗಳಲ್ಲಿ ಉರಿಬಿಸಿಲು ಅಥವಾ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ವಾರಂತ್ಯಕ್ಕೆ ರಾಜ್ಯದ ಸರಾಸರಿ ಗರಿಷ್ಠ ತಾಪಮಾನ 34-32 ಡಿಗ್ರಿಯಷ್ಟಿದ್ದರೆ ಕನಿಷ್ಠ ತಾಪಮಾನ 22-23 ಡಿಗ್ರಿಯಷ್ಟಿರಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ದಾವಣಗೆರೆ: ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿ ವಿದ್ಯಾರ್ಥಿ ಸಾವು, 45 ಪ್ರಯಾಣಿಕರಿಗೆ ಗಾಯ