Select Your Language

Notifications

webdunia
webdunia
webdunia
webdunia

ಅತೀ ಹೆಚ್ಚು ಮತ ಪಡೆದ ತನ್ನ ಕ್ಷೇತ್ರದಲ್ಲೇ ಪ್ರಿಯಾಂಗಾ ಗಾಂಧಿಗೆ ಹೀಗಾಬರ್ದಿತ್ತು

Congress MP Priyanka Gandhi

Sampriya

ವಯನಾಡು , ಮಂಗಳವಾರ, 28 ಜನವರಿ 2025 (16:03 IST)
Photo Courtesy X
ವಯನಾಡು: ಇಂದು ಕಣ್ಣೂರು ವಿಮಾನ ನಿಲ್ದಾಣದಿಂದ ಕೇರಳದ ಕ್ಷೇತ್ರಕ್ಕೆ ಪ್ರಯಾಣಿಸುವಾಗ ಕಾಂಗ್ರೆಸ್‌ನ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮೇಲೆ ಎಲ್‌ಡಿಎಫ್ ಕಾರ್ಯಕರ್ತರ ಗುಂಪು ಕಪ್ಪು ಬಾವುಟ ಪ್ರದರ್ಶಿಸಿದ ಘಟನೆ ನಡೆದಿದೆ.

ಮೂಲಗಳ ಪ್ರಕಾರ ಈ ಘಟನೆ ಕಣಿಯಾರಂನಲ್ಲಿ ನಡೆದಿದೆ. ತಾವು ಗೆದ್ದ ಕ್ಷೇತ್ರದಲ್ಲಿ ಹುಲಿ ದಾಳಿಯಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದರೂ ತಡವಾಗಿ ಕ್ಷೇತ್ರಕ್ಕೆ ಆಗಮಿಸಿದ್ದೀರಿ ಎಂದು ಸಿಪಿಐಎಂ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

ಇತ್ತೀಚೆಗೆ ವಯನಾಡಿನ ಪಂಚರಕೊಲ್ಲಿ ಗ್ರಾಮದ ಪ್ರಿಯದರ್ಶಿನಿ ಎಸ್ಟೇಟ್‌ನಲ್ಲಿ ಹುಲಿ ದಾಳಿಗೆ ಬಲಿಯಾದ ರಾಧಾ ಅವರ ಮನೆಗೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿದರು. ರಾಧಾ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಶ್ರೀಮತಿ ವಾದ್ರಾ ಅವರೊಂದಿಗೆ ಹಿರಿಯ ಕಾಂಗ್ರೆಸ್ ನಾಯಕರು ಇದ್ದರು.

ನಂತರ ಅವರು ಕಳೆದ ಡಿಸೆಂಬರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಖಜಾಂಚಿ ಎನ್.ಎಂ.ವಿಜಯನ್ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು.

ವಾದ್ರಾ ಅವರು ವಿರೋಧ ಪಕ್ಷದ ನಾಯಕ ವಿ.ಡಿ ಹೊರಡುತ್ತಿರುವ ‘ಮಲಯೋರ ಜಾಥಾ’ದಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಲ್ತಾನ್ ಬತ್ತೇರಿಯಲ್ಲಿ ಸತೀಶ.

Share this Story:

Follow Webdunia kannada

ಮುಂದಿನ ಸುದ್ದಿ

ಮೆಕ್ಕಾ ಮದೀನಾಕ್ಕೆ ಹೋದರೆ ಸ್ವರ್ಗ ಸಿಗುತ್ತಾ: ಎನ್ ರವಿಕುಮಾರ್