Select Your Language

Notifications

webdunia
webdunia
webdunia
webdunia

ಕೇರಳ ನರಹಂತಕ ಹುಲಿಯ ಹೊಟ್ಟೆಯೊಳಗೆ ಸಿಕ್ಕ ವಸ್ತುಗಳನ್ನು ಕೇಳಿದ್ರೆ ಶಾಕ್ ಆಗ್ತೀರಿ

Kerala Tiger

Krishnaveni K

ವಯನಾಡು , ಮಂಗಳವಾರ, 28 ಜನವರಿ 2025 (12:08 IST)
ವಯನಾಡು: ಇತ್ತೀಚೆಗೆ ಕೇರಳದ ವಯನಾಡಿನಲ್ಲಿ ಜನರ ನಿದ್ದೆಗೆಡಿಸಿದ್ದ ನರಹಂತಕ ಹುಲಿ ನಿನ್ನೆ ಬೆಳಗಿನ ಜಾವ ಶವವಾಗಿ ಪತ್ತೆಯಾಗಿತ್ತು. ಹುಲಿಯ ಪೋಸ್ಟ್ ಮಾರ್ಟಂ ಮಾಡಿ ನೋಡಿದಾಗ ಸಿಕ್ಕ ವಸ್ತುಗಳ ಬಗ್ಗೆ ಕೇಳಿದ್ರೆ ನಿಜಕ್ಕೂ ಶಾಕಿಂಗ್.

ವಯನಾಡಿನಲ್ಲಿ ಓರ್ವ ಮಹಿಳೆಯನ್ನು ತಿಂದು ಹಾಕಿದ್ದ ಹುಲಿಯನ್ನು ಸೆರೆ ಹಿಡಿಯಲು ಅಧಿಕಾರಿಗಳು ಇನ್ನಿಲ್ಲದ ಹರಸಾಹಸ ಮಾಡಿದ್ದರು. ಜೀವಂತವಾಗಿ ಸಾಧ್ಯವಾಗದೇ ಹೋದರೆ ಗುಂಡಿಕ್ಕಿ ಕೊಂದಾದರೂ ಸೆರೆ ಹಿಡಿಯಿರಿ ಎಂದು ಸರ್ಕಾರದ ಆದೇಶವಾಗಿತ್ತು. ಇದೀಗ ನಿನ್ನೆ ಹುಲಿಯ ಶವ ಪತ್ತೆಯಾಗಿತ್ತು. ಇದರೊಂದಿಗೆ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.

ಇದೀಗ ಹುಲಿಯ ಪೋಸ್ಟ್ ಮಾರ್ಟಂ ನಡೆಸಲಾಗಿದ್ದು, ಹುಲಿಯ ಹೊಟ್ಟೆಯೊಳಗಿದ್ದ ವಸ್ತುಗಳನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಹುಲಿಯ ಹೊಟ್ಟೆಯೊಳಗೆ ಇತ್ತೀಚೆಗೆ ಅದು ಕೊಂದು ಹಾಕಿದ್ದ ಮಹಿಳೆಯ ಕೂದಲು, ಕಿವಿಯೋಲೆ, ಬಟ್ಟೆ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಈ ಹುಲಿಯೇ ಮಹಿಳೆಯನ್ನು ಕೊಂದು ಹಾಕಿರುವುದು ಎಂದು ಖಚಿತವಾಗಿದೆ.

ಹುಲಿಯ ಕುತ್ತಿಗೆಯಲ್ಲೂ ಆಳವಾದ ಗಾಯ ಕಂಡುಬಂದಿದೆ. ಹೀಗಾಗಿ ಈ ಹುಲಿ ಇನ್ನೊಂದು ಹುಲಿಯೊಂದಿಗೆ ಕಾದಾಡಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ. ನಾಲ್ಕರಿಂದ ಐದು ವರ್ಷ ವಯಸ್ಸಿನ ಹೆಣ್ಣು ಹುಲಿ ಇದಾಗಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮ ಸಂಬಂಧ ಆಪ್ ಬಳಸೋದ್ರಲ್ಲಿ ಬೆಂಗಳೂರಿಗರೇ ನಂ.1