Publish Date: Mon, 27 Jan 2025 (14:01 IST)
Updated Date: Mon, 27 Jan 2025 (14:04 IST)
ವಯನಾಡು: ಕೇರಳದ ವಯನಾಡಿನಲ್ಲಿ ಮಹಿಳೆಯೊಬ್ಬರನ್ನು ಕೊಂದು ತಿಂದು ಹಾಕಿದ ನರಭಕ್ಷಕ ಹುಲಿ ಈಗ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ ಸತ್ತ ಮೇಲೂ ಹುಲಿಯ ಕಣ್ಣು ನೋಡಿದರೆ ಅರೆಕ್ಷಣ ಭಯವಾಗುವಂತಿದೆ.
ಕೇರಳದ ವಯನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಸಾರ್ವಜನಿಕರು ರಾತ್ರಿ ಓಡಾಡಲೂ ಭಯಪಡುವ ಪರಿಸ್ಥಿತಿಯಿತ್ತು. ಇದಕ್ಕೆ ಕಾರಣ ನರಹಂತಕ ಹುಲಿ. ಕಳೆದ ವಾರ ಕಾಫಿ ಪ್ಲ್ಯಾಂಟೇಷನ್ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಈ ಹುಲಿ ಕೊಂದು ತಿಂದು ಹಾಕಿತ್ತು.
ಇದರ ಬೆನ್ನಲ್ಲೇ ಜನರಲ್ಲಿ ಭಯಹುಟ್ಟಿತ್ತು. ಹೀಗಾಗಿ ಈ ಹುಲಿಯನ್ನು ಜೀವಂತ ಇಲ್ಲವೇ ಹತ್ಯೆ ಮಾಡಿಯಾದರೂ ಸೆರೆಹಿಡಿಯಬೇಕು ಎಂದು ಅರಣ್ಯಾಧಿಕಾರಿಗಳು ಪಣ ತೊಟ್ಟಿದ್ದರು. ನರಹಂತಕ ಹುಲಿಗಾಗಿ ಹುಡುಕಾಟವೂ ಶುರುವಾಗಿತ್ತು.
ಆದರೆ ಇಂದು ಬೆಳಗಿನ ಜಾವ 2.30 ರ ಸುಮಾರಿಗೆ ಪಿಲಕ್ಕಾವು ಪ್ರದೇಶದಲ್ಲಿ ನರಹಂತಕ ಹುಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಎಲ್ಲಾ ರೀತಿಯ ಔಪಚಾರಿಕತೆ ಮುಗಿಸಿದ ಅರಣ್ಯಾಧಿಕಾರಿಗಳು ಹುಲಿಯ ಮೃತದೇಹವನ್ನು ಬಲೆಯಲ್ಲಿ ಹಾಕಿ ಹೊತ್ತೊಯ್ದಿದ್ದಾರೆ. ವಿಶೇಷವೆಂದರೆ ಸತ್ತ ಮೇಲೂ ಹುಲಿಯ ಹೊಳೆಯುವ ಕಣ್ಣುಗಳು ಭಯಹುಟ್ಟಿಸುವಂತಿತ್ತು. ಈ ವಿಡಿಯೋ ಇಲ್ಲಿದೆ ನೋಡಿ.