Publish Date: Fri, 21 Sep 2018 (07:15 IST)
Updated Date: Fri, 21 Sep 2018 (07:17 IST)
ಪಾಟ್ನಾ: ಬಿಹಾರದ ಪಾಟ್ನಾದ ಶಾಲೆಯೊಂದರ ಪ್ರಾಂಶುಪಾಲ ಮತ್ತು ಕ್ಲರ್ಕ್ 5 ನೇ ತರಗತಿಯ ವಿದ್ಯಾರ್ಥಿನಿ ಮೇಲೆ 9 ತಿಂಗಳಿನಿಂದ ನಿರಂತರ ಅತ್ಯಾಚಾರವೆಸಗಿದ್ದು, ಈಗ ಆಕೆ 2 ತಿಂಗಳ ಗರ್ಭಿಣಿಯಾದಾಗ ಘಟನೆ ಬೆಳಕಿಗೆ ಬಂದಿದೆ.
ಇದೀಗ ಪ್ರಿನ್ಸಿಪಾಲ್ ಮತ್ತು ಕ್ಲರ್ಕ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ.
ಶಾಲೆಯ ಆವರಣದಲ್ಲಿ ಪ್ರಿನ್ಸಿಪಾಲ್ ಅತ್ಯಾಚಾರವೆಸಗುವಾಗ ಕ್ಲರ್ಕ್ ಅದನ್ನು ವಿಡಿಯೋ ಮಾಡುತ್ತಿದ್ದ. ನಂತರ ವಿಡಿಯೋ ತೋರಿಸಿ ಯಾರಿಗೂ ಹೇಳದಂತೆ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಆದರೆ ಒಂದು ದಿನ ಶಾಲೆಯಿಂದ ಬಂದ ಬಾಲಕಿ ನಿರಂತರವಾಗಿ ವಾಂತಿ ಮಾಡಿಕೊಳ್ಳುತ್ತಿದ್ದಾಗ ಪೋಷಕರು ವೈದ್ಯರ ಬಳಿಗೆ ಕರೆದೊಯ್ದಿದ್ದಾರೆ. ಆಗ ಆಕೆ 2 ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಬಾಲಕಿಯನ್ನು ವಿಚಾರಿಸಿದಾಗ ಪ್ರಿನ್ಸಿಪಾಲ್ ಮತ್ತು ಕ್ಲರ್ಕ್ ನ ನೀಚ ಕೃತ್ಯ ಬಹಿರಂಗಪಡಿಸಿದ್ದಾಳೆ. ಕೂಡಲೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.