Publish Date: Thu, 20 Sep 2018 (06:41 IST)
Updated Date: Thu, 20 Sep 2018 (06:53 IST)
ಹೈದರಾಬಾದ್ : ಕೆಲಸ ಕೊಡಿಸ್ತೀನಿ ಅಂತ ಹೇಳಿ ಹಲವು ತಿಂಗಳಿನಿಂದ 29 ವರ್ಷದ ವಿಕಲಚೇತನ ಮಹಿಳೆಗೆ ವಂಚಿಸಿ ಆಕೆಯಿಂದ 3 ಲಕ್ಷ ಹಣವನನ್ನು ಪಡೆದುಕೊಂಡಿದಲ್ಲದೇ ಆಕೆಯ ಮೇಲೆ ಅತ್ಯಾಚಾರವೆಸಗಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಆರೋಪಿ ಸೋಮ ಸೈಲು ಎಂದು ಗುರುತಿಸಲಾಗಿದ್ದು, ಈತ ರಸ್ತೆ ಸಾರಿಗೆ ನಿಗಮ(ಆರ್‍ಟಿಸಿ)ದಲ್ಲಿ ಕೆಲಸ ನಿರ್ವಹಿಸುತ್ತಿದ್ದನು. ಸಂತ್ರಸ್ತ ಮಹಿಳೆಯ ಪತಿ ಕೂಡ ರಸ್ತೆ ಸಾರಿಗೆ ನಿಗಮ(ಆರ್‍ಟಿಸಿ)ದಲ್ಲಿ ಕೆಲಸ ಮಾಡುತ್ತಿದ್ದ. ಆತನ ಸಾವಿನ ನಂತರ ಆ ಕೆಲಸವನ್ನು ತಾನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದ ಆ ಮಹಿಳೆಗೆ ಸೋಮ ಸೈಲು ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದಾನೆ. ಅಲ್ಲದೇ ನಕಲು ಐಡಿ ಹಾಗೂ ಸ್ಯಾಲರಿ ಸ್ಲಿಪ್ ಗಳನ್ನು ಮಾಡಿ ಕಚೇರಿ ಹೋಗದಿದ್ದರೂ ತಮ್ಮ ಅಕೌಂಟ್ ಗೆ ಹಣ ನೀಡುವುದಾಗಿ ಸುಳ್ಳು ಹೇಳಿದ್ದಾನೆ. ಹಾಗೇ ಆಕೆಯಿಂದ 3 ಲಕ್ಷ ಹಣವನ್ನು ಪಡೆದುಕೊಂಡಿದ್ದಾನೆ.
ಅಷ್ಟೇ ಅಲ್ಲದೇ ಒಂದು ದಿನ ಆಕೆಯ ಮನೆಗೆ ಬಂದು ಸ್ವೀಟ್ಸ್ ನೀಡಿ ಆಕೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸೆಗಿದ್ದಾನೆ. ಹೀಗೆ ಆಕೆಯ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಈ ಬಗ್ಗೆ ಮಹಿಳೆ ಇದೀಗ ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸದ್ಯ ಮಹಿಳೆಯ ದೂರಿನಂತೆ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಅತ್ಯಾಚಾರ ಹಾಗೂ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.