Select Your Language

Notifications

webdunia
webdunia
webdunia
Thursday, 13 March 2025
webdunia

ಅಮೇರಿಕಾದ ರಿಯಾಲಿಟಿ ಶೋನಲ್ಲಿ ಭಾಗವಹಿಸಬೇಕಾದ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ದುರ್ಷ್ಕಮಿ

ಅಮೇರಿಕಾದ ರಿಯಾಲಿಟಿ ಶೋನಲ್ಲಿ ಭಾಗವಹಿಸಬೇಕಾದ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ದುರ್ಷ್ಕಮಿ
ಭೋಪಾಲ್ , ಗುರುವಾರ, 20 ಸೆಪ್ಟಂಬರ್ 2018 (06:33 IST)
ಭೋಪಾಲ್ : 21 ವರ್ಷದ ಯುವತಿಯ ಮೇಲೆ ಹಾಡಹಗಲೇ ವ್ಯಕ್ತಿಯೊರ್ವ ಆ್ಯಸಿಡ್ ಮಿಶ್ರಿತ ರಾಸಾಯನಿಕ ಪದಾರ್ಥವನ್ನು ಎಸೆದು ದಾಳಿ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.


ಈ ಯುವತಿ ಅಮೇರಿಕಾದಲ್ಲಿ ನಡೆಯಬೇಕಾಗಿದ್ದ ದೊಡ್ಡ ರಿಯಾಲಿಟಿ ಶೋ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ದುರ್ಷ್ಕಮಿಯೊಬ್ಬ ಆಕೆ ರಸ್ತೆಯಲ್ಲಿ ಹೋಗುವ ವೇಳೆ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ. ಇದರಿಂದ ಯುವತಿಯ ಕಣ್ಣಿನಲ್ಲಿರುವ ಕಾರ್ನಿಯಾಗಳಿಗೆ ಹೆಚ್ಚು ಹಾನಿಯಾಗಿದೆ. ಹೀಗಾಗಿ ಯುವತಿ ದೃಷ್ಟಿಯನ್ನು ಕಳೆದುಕೊಂಡಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.


ದಾಳಿ ಮಾಡಿದ ದುರ್ಷ್ಕಮಿಯನ್ನು ಮಹೇಂದ್ರ ಸೋನು ಎಂದು ಗುರುತಿಸಲಾಗಿದ್ದು, ರಸ್ತೆಯ ಬಳಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ರಾಸಾಯನಿಕ ಎಸೆದು ಮಹೇಂದ್ರ ಸೋನು ಪರಾರಿಯಾಗುತ್ತಿರುವ ಸಂಪೂರ್ಣ ದೃಶ್ಯಗಳು ಸೆರೆಯಾಗಿದೆ. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಸರ್ವಾಧಿಕಾರಿ ಎಂದ ರಾಹುಲ್ ಗಾಂಧಿ