Publish Date: Wed, 19 Sep 2018 (07:01 IST)
Updated Date: Wed, 19 Sep 2018 (07:04 IST)
ಹೈದರಾಬಾದ್ : ಇಷ್ಟು ದಿನ ಸಿನಿಮಾ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಯಾಗುತ್ತಿದ್ದ ಟಾಲಿವುಡ್ ನಟ ವಿಜಯ್ ದೇವರಕೊಂಡ ಇದೀಗ ಹುಡುಗಿಯೊಬ್ಬಳ ಜೊತೆ ಲವ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
ಹೌದು. ಇತ್ತೀಚೆಗಷ್ಟೇ ನಟ ವಿಜಯ್ ದೇವರಕೊಂಡ ವಿದೇಶಿ ಹುಡುಗಿ ಜೊತೆ ಲವ್ ವಿಷ್ಯ ಭಾರಿ ಸುದ್ದಿ ಮಾಡುತ್ತಿದೆ. ಅವರು ಆಕೆಯ ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾಗಾಗಿ ವಿಜಯ್ ಅವರಿಗೆ ಮೊದಲೇ ಗರ್ಲ್ ಫ್ರೆಂಡ್ ಇದ್ದಾಳಾ ಎಂಬ ಚರ್ಚೆ ಕೂಡ ನಡೆಯುತ್ತಿದೆ.
ಆದರೆ ತಮ್ಮ ಬಗ್ಗೆ ಹರಿದಾಡುತ್ತಿರುವ ಗಾಸಿಪ್ ಗಳಿಗೆ ಇದೀಗ ಬ್ರೇಕ್ ಹಾಕಿದ ನಟ ವಿಜಯ್ ದೇವರಕೊಂಡ ತಾನಿನ್ನು ಸಿಂಗಲ್ ಎಂದಿದ್ದಾರೆ. ಹಾಗೇ ವೈರಲ್ ಆಗಿರೋ ಫೋಟೋಗಳು ಫೇಕ್ ಆಗಿದ್ದು, ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ ಅನ್ನೋ ವಿಷಯವನ್ನು ವಿಜಯ್ ಅವರ ಆಪ್ತರು ಮಾಧ್ಯಮವೊಂದಕ್ಕೆ ಸ್ಪಷ್ಟ ಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.