Select Your Language

Notifications

webdunia
webdunia
webdunia
webdunia

ಹಿಂಜೆವಾಡಿಯಲ್ಲಿ ಕಾಮುಕರ ಅಟ್ಟಹಾಸಕ್ಕೆ ಓರ್ವ ಬಾಲಕಿ ಬಲಿ

ಹಿಂಜೆವಾಡಿಯಲ್ಲಿ ಕಾಮುಕರ ಅಟ್ಟಹಾಸಕ್ಕೆ ಓರ್ವ ಬಾಲಕಿ ಬಲಿ
ಪುಣೆ , ಶುಕ್ರವಾರ, 21 ಸೆಪ್ಟಂಬರ್ 2018 (06:59 IST)
ಪುಣೆ : ಕಾಮುಕರ ಅಟ್ಟಹಾಸ ಇತ್ತೀಚೆಗೆ  ದಿನೇ ದಿನೇ ಹೆಚ್ಚಾಗುತ್ತಿದ್ದು ಇದೀಗ  ಹಿಂಜೆವಾಡಿಯಲ್ಲಿ ಕಾಮುಕರು ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದು ಅದರಲ್ಲಿ ಓರ್ವಳು ಮೃತಪಟ್ಟಿರುವ ಘಟನೆ ನಡೆದಿದೆ.


ಕಾಮುಕರು ಆಟವಾಡುತ್ತಿದ್ದ ಬಾಲಕಿಯರಿಗೆ ಚಾಕೊಲೇಟ್​ ಕೊಡಿಸುವುದಾಗಿ ಪುಸಲಾಯಿಸಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ ಈ ವಿಷಯ ಎಲ್ಲಿಯೂ ಬಾಯಿ ಬಿಡದಂತೆ ಬೆದರಿಕೆ ಕೂಡ ಹಾಕಿದ್ದಾರೆ.


ಈ ಘಟನೆಯಿಂದ ಆಘಾತಕ್ಕೊಳಗಾಗಿ ಓರ್ವ ಬಾಲಕಿ ಕೋಮಾ ಸ್ಥಿತಿಗೆ ತಲುಪಿದ್ದು, ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ರಾತ್ರಿ 10:30ಕ್ಕೆ ಈ ಬಾಲಕಿ ಮೃತಪಟ್ಟಳು ಎಂದು ವೈದ್ಯರು ತಿಳಿಸಿದ್ದಾರೆ. ಮತ್ತೋರ್ವ ಬಾಲಕಿಗೆ ಚಿಕಿತ್ಸೆ ಮುಂದುವರಿದಿದೆ. ಈ ಘಟನೆಗೆ ಸಂಬಂಧಿಸಿದ ಆರೋಪಿಯೋರ್ವನನ್ನು ಕೋಮಾದಲ್ಲಿದ್ದ ಬಾಲಕಿ ಸಾಯುವ ಕೆಲವೇ ಗಂಟೆಗಳಿಗೆ ಮುನ್ನ ಪೊಲೀಸರು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಹೋದರಿಯ ಆರೈಕೆಗೆ ಬಂದ ಹೋಂ ನರ್ಸ್ ಮೇಲೆ ಅತ್ಯಾಚಾರ ಎಸಗಿದ 70 ವರ್ಷದ ವೃದ್ಧ