Publish Date: Thu, 20 Sep 2018 (07:07 IST)
Updated Date: Thu, 20 Sep 2018 (07:09 IST)
ನವದೆಹಲಿ : 7 ವರ್ಷದ ಬಾಲಕಿಯ ಮೇಲೆ 21 ವರ್ಷದ ಯುವಕನೊಬ್ಬ ಅತ್ಯಾಚಾರ ಎಸಗಿದ್ದಲ್ಲದೇ , ಆಕೆಯ ಗುಪ್ತಾಂಗಕ್ಕೆ ವಾಟರ್ ಪೈಪ್ ಹಾಕಿ ಕಿರುಕುಳ ನೀಡಿರುವ ಘಟನೆ ಶಹದಾರಾದ ಸೀಮಾಪುರಿ ಪ್ರದೇಶದಲ್ಲಿ ನಡೆದಿದೆ.
ಆರೋಪಿ ರಾಗ್ಪಿಕ್ಕರ್ ಎಂದು ಗುರುತಿಸಲಾಗಿದ್ದು, ಇತ ಸಂತ್ರಸ್ತೆಯ ನೆರೆಮನೆಯವನು ಎಂಬುದಾಗಿ ತಿಳಿದುಬಂದಿದೆ. ಇತ ಸೋಮವಾರ ರಾತ್ರಿ ಸುಮಾರು 10.30ಕ್ಕೆ ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಎಳೆದುಕೊಂಡು ಪೊದೆಯ ಬಳಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೇ ಆಕೆಯ ಗುಪ್ತಾಂಗಕ್ಕೆ ವಾಟರ್ ಪೈಪ್ ಹಾಕಿ ಕಿರುಕುಳ ನೀಡಿದ್ದಾನೆ.
ಬಾಲಕಿ ಮನೆಗೆ ಹಿಂದಿರುಗಿದಾಗ ರಕ್ತಸ್ರಾವವಾಗಿದ್ದು, ಈ ಬಗ್ಗೆ ತಾಯಿ ಹೇಳಿದಾಗ ನಡೆದ ಘಟನೆಯನ್ನು ವಿವರಿಸಿದ್ದಾಳೆ. ನಂತರ ತಾಯಿ ಸೀಮಾಪುರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಿಕೊಂಡ ಪೊಲೀಸರು ಮಂಗಳವಾರ ಆರೋಪಿಯನ್ನು ಬಂಧಿಸಿದ್ದಾರೆ.
ಸಂತ್ರಸ್ತೆಯನ್ನು ಗುರು ತೇಜ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಂತ್ರಸ್ತೆಗೆ ಅತಿಯಾದ ರಕ್ತಸ್ರಾವವಾಗಿದ್ದು, ಖಾಸಗಿ ಭಾಗಗಳಲ್ಲಿ ಗಾಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.