Select Your Language

Notifications

webdunia
webdunia
webdunia
webdunia

ಮ್ಯಾಟಿಮೋನಿ ಆ್ಯಪ್‌ನಲ್ಲಿ ಪ್ರೀತಿ ನಾಟಕವಾಡಿ 20ಕ್ಕೂ ಅಧಿಕ ಯುವತಿಯರಿಗೆ ವಂಚಿಸಿದವ ಅರೆಸ್ಟ್‌

ಮ್ಯಾಟಿಮೋನಿ ಆ್ಯಪ್‌ನಲ್ಲಿ ಪ್ರೀತಿ ನಾಟಕವಾಡಿ 20ಕ್ಕೂ ಅಧಿಕ ಯುವತಿಯರಿಗೆ ವಂಚಿಸಿದವ ಅರೆಸ್ಟ್‌

Sampriya

ನವದೆಹಲಿ , ಬುಧವಾರ, 25 ಸೆಪ್ಟಂಬರ್ 2024 (16:34 IST)
ನವದೆಹಲಿ: ಮ್ಯಾಟ್ರಿಮೋನಿ ಆ್ಯಪ್ ಮೂಲಕ ಯುವತಿಯರನ್ನು ತನ್ನ ಪ್ರೀತಿಯ ಬಲೆಯಲ್ಲಿ ಬೀಳಿಸಿ, ಅವರಿಂದ ದುಬಾರಿ ವಸ್ತುಗಳನ್ನು ಸುಲಿಗೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಕೊಲೆಗೂ ಪೊಲೀಸರು ಬಂಧಿಸಿದ್ದಾರೆ.

ಈತ ಸುಮಾರು 20ಕ್ಕೂ ಅಧಿಕ ಯುವತಿಯರೊಂದಿಗೆ ಪ್ರೀತಿ ನಾಟಕವಾಡಿ, ಅವರಿಗೆ ಮೋಸ ಮಾಡಿದ್ದಾನೆ. ಬಿಸ್ರಖ್ ಪೊಲೀಸರು ಆರೋಪಿ ರಾಹುಲ್ ಚತುರ್ವೇದಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ಈತ ಬೇರೆ ಬೇರೆ ಹೆಸರುಗಳಲ್ಲಿ ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿ ತನ್ನ ಫೇಕ್ ಪ್ರೋಪೈಲ್ ಕ್ರಿಯೇಟ್ ಮಾಡಿ ಯುವತಿಯರ ಜತೆ ಪ್ರೀತಿ ನಾಟಕವಾಡಿ ಅವರಿಗೆ ಮೋಸ ಮಾಡಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜೈಲಿಗೆ ಕಳುಹಿಸಲಾಗಿದೆ.

ಆರೋಪಿ ರಾಹುಲ್ ಚತುರ್ವೇದಿ ಜೀವನಸತಿ ಡಾಟ್ ಕಾಮ್ ಮತ್ತು ಬೆಟರ್ ಹಾಫ್ ನಲ್ಲಿ ಪ್ರೊಫೈಲ್ ಅನ್ನು ಸ್ಥಾಪಿಸಿ, ವಿಪ್ರೋದಲ್ಲಿ ಮಾನವ ಸಂಪನ್ಮೂಲ ಪ್ರಾದೇಶಿಕ ವ್ಯವಸ್ಥಾಪಕ ಎಂದು ಫೇಕ್ ಐಡಿ ನೀಡಿರುವುದು ತಿಳಿದುಬಂದಿದೆ.

ಯುವತಿಯರಿಂದ ಐ ಫೋನ್ , ಬೆಲೆ ಬಾಳುವ ಮೊಬೈಲ್ ಫೋನ್ , ಹಣ ಮುಂತಾದ ದುಬಾರಿ ವಸ್ತುಗಳನ್ನು ಲಪಟಾಯಿಸಿದ್ದಾನೆ. ಚತುರ್ವೇದಿ ತನಗೆ 2 ಲಕ್ಷ ರೂಪಾಯಿ ನಗದು ವಂಚಿಸಿ ತನ್ನ ಐಫೋನ್ ತೆಗೆದುಕೊಂಡಿದ್ದಾನೆ ಎಂದು ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಬಿಸ್ರಖ್ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಆತನ ವಿರುದ್ಧ ಬೀಟಾ ಟೂ ಪೊಲೀಸ್ ಠಾಣೆಯಲ್ಲಿ ಹೆಚ್ಚುವರಿ ದೂರು ದಾಖಲಾಗಿದೆ.

ವಿಚಾರಣೆ ವೇಳೆ ಚತುರ್ವೇದಿ ತನ್ನ ವಂಚನೆಯಲ್ಲಿ 20 ಮಹಿಳೆಯರನ್ನು ಸಿಕ್ಕಿಬಿದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ತನ್ನ ನಕಲಿ ಗುರುತನ್ನು ರುಜುವಾತುಪಡಿಸಲು, ಅವನು ವಿಪ್ರೊದಲ್ಲಿ ಸಿಗುತ್ತಿರುವ ಹಾಗೇ ನಕಲಿ ಸಂಬಳದ ಸ್ಲಿಪ್‌ ಅನ್ನು ದಾಖಲಿಸಿದ್ದಾನೆ. ಅದಲ್ಲದೆ ಈ ವೇಳೆ ಯುವತಿಯರಿಗೆ ವಿದೇಶಿ ಪ್ರವಾಸದ ಆಮಿಷವೊಡ್ಡಿದ್ದಾನೆ.

ಇತರ ಪ್ರಕರಣಗಳಲ್ಲಿ ಒಬ್ಬ ಯುವತಿಯಿಂದ ಎರಡು ಫೋನ್‌ಗಳನ್ನು, ಇನ್ನೊಬ್ಬಳಿಂದ 2 ಲಕ್ಷ ರೂಪಾಯಿ ಹಣವನ್ನು ಪಡೆದಿರುವುದಾಗಿ ಹಾಗೂ ಮೂರನೇ ಮಹಿಳೆಯಿಂದ ದುಬಾರಿ ವೆಚ್ಚದ ಶೂಗಳನ್ನು ಪಡೆದಿರುವುದಾಗಿ ಬಾಯಿಬಿಟ್ಟಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ವಿರುದ್ಧ ತನಿಖೆಯಾಗಲಿ: ಇಂತಹ ಭ್ರಷ್ಟರಿಗೆ ಅವಕಾಶ ಕೊಡ್ತೀರಾ ಎಂದು ಕುಹುಕವಾಡಿದ ಪ್ರಧಾನಿ ಮೋದಿ