Select Your Language

Notifications

webdunia
webdunia
webdunia
webdunia

ಜೀಸಸ್ ಬಗ್ಗೆ ಮಾತನಾಡಬಹುದು, ಸನಾತನ ಧರ್ಮದ ಬಗ್ಗೆ ಮಾತನಾಡಬಾರದಾ: ಪವನ್ ಕಲ್ಯಾಣ್ ಆಕ್ರೋಶ

Pawan Kalyan

Krishnaveni K

ಹೈದರಾಬಾದ್ , ಮಂಗಳವಾರ, 24 ಸೆಪ್ಟಂಬರ್ 2024 (11:34 IST)
ಹೈದರಾಬಾದ್: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ನಟ ಪ್ರಕಾಶ್ ರಾಜ್ ಮೇಲೆ ಆಂಧ್ರ ಡಿಸಿಎಂ, ನಟ ಪವನ್ ಕಲ್ಯಾಣ್ ವಾಗ್ದಾಳಿ ನಡೆಸಿದ್ದಾರೆ.

ತಿರುಪತಿ ಲಡ್ಡುಗೆ ಜಗನ್ ರೆಡ್ಡಿ ಸಿಎಂ ಆಗಿದ್ದಾಗ ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗುತ್ತಿತ್ತು ಎಂಬ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಆಂಧ್ರ ಡಿಸಿಎಂ ಮತ್ತು ನಟ ಪವನ್ ಕಲ್ಯಾಣ್ ದೇಶದಲ್ಲಿ ಸನಾತನ ಧರ್ಮ ಟ್ರಸ್ಟ್  ನಿರ್ಮಾಣ ಮಾಡುವ ಅಗತ್ಯವಿದೆ ಎಂದಿದ್ದರು.

ಇದಕ್ಕೆ ನಟ ಪ್ರಕಾಶ್ ರಾಜ್ ಕಾಮೆಂಟ್ ಮಾಡಿದ್ದರು. ಪವನ್ ನೀವು ನಿಮ್ಮ ರಾಜ್ಯದ ಬಗ್ಗೆ ಮಾತ್ರ ಗಮನ ಹರಿಸಿ. ಬೇಡದ ವಿಚಾರವೆಲ್ಲಾ ಯಾಕೆ ಎಂಬರ್ಥದಲ್ಲಿ ಮಾತನಾಡಿದ್ದರು. ದೇಶದಲ್ಲಿ ಈಗಾಗಲೇ ಸಾಕಷ್ಟು ಕೋಮುಗಲಭೆಗಳಾಗುತ್ತಿವೆ. ಇಂತಹ ಟ್ರಸ್ಟ್ ನಿರ್ಮಾಣ ಮಾಡಿದರೆ ಶಾಂತಿ ಕದಡಿದಂತಾಗುತ್ತದೆ ಎಂದಿದ್ದರು.

ಇದೀಗ ಪ್ರಕಾಶ್ ರಾಜ್ ವಿರುದ್ಧ ಪವನ್ ಕಲ್ಯಾಣ್ ವಾಗ್ದಾಳಿ ನಡೆಸಿದ್ದಾರೆ. ತಿರುಪತಿ ಲಡ್ಡು ಕಲಬೆರಕೆಯಾಗಿ ಅಪವಿತ್ರವಾಗಿರುವ ಕಾರಣಕ್ಕೆ ಪವನ್ ದೀಕ್ಷೆ ತೆಗೆದುಕೊಂಡಿದ್ದಾರೆ. ಈ ನಡುವೆ ಇಂದು ಪ್ರಕಾಶ್ ರಾಜ್ ವಿರುದ್ಧ ಕೆಂಡಾಮಂಡಲರಾಗಿ ಮಾತನಾಡಿದ್ದಾರೆ. ಜೀಸಸ್ ಬಗ್ಗೆ ಮಾತನಾಡಬಹುದು, ಪ್ರವಾದಿ ಬಗ್ಗೆ ಮಾತನಾಡಬಹುದು ಆದರೆ ಸನಾತನ ಧರ್ಮದ ಬಗ್ಗೆ ಮಾತನಾಡಬಾರದೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾಲಕ್ಷ್ಮಿ ಮರ್ಡರ್ ಗೆ ನಿಜ ಕಾರಣವೇನು, ಮೃತದೇಹವನ್ನು ಪೀಸ್ ಮಾಡಿದ್ದು ಹೇಗೆ ಇಲ್ಲಿದೆ ಭೀಕರತೆಯ ವಿವರ