Select Your Language

Notifications

webdunia
webdunia
webdunia
webdunia

ತಿರುಪತಿ ಲಡ್ಡು ವಿವಾದ: ತಿಳಿಗೇಡಿ ಹಿಂದೂಗಳಿಂದಲೇ ಹೀಗಾಗಿದೆ ಎಂದು ಪ್ರತಾಪ್ ಸಿಂಹ ವಾಗ್ದಾಳಿ

Pratap Simha

Krishnaveni K

ಬೆಂಗಳೂರು , ಸೋಮವಾರ, 23 ಸೆಪ್ಟಂಬರ್ 2024 (14:29 IST)
ಬೆಂಗಳೂರು: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಮಾಡಿದ ವಿಚಾರಕ್ಕೆ ಸಂಬಂಧಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ ಹಿಂದೂಗಳ ತಿಳಿಗೇಡಿತನದಿಂದಲೇ ಈ ಘಟನೆ ಸಂಭವಿಸಿದೆ ಎಂದಿದ್ದಾರೆ.
 

‘1947 ರಲ್ಲಿ ಭಾರತದ ಅಭಿಮಾನ ಶೂನ್ಯ, ಹಿಂದೂಗಳ ತಿಳಿಗೇಡಿತನದಿಂದ ಈ ಮುಸಲ್ಮಾನರಿಂದ, ಕ್ರಿಶ್ಚಿಯನ್ನರಿಂದ ಯಾವ ರೀತಿ ಅಪಾಯವಿದೆ ಎಂದು ಆವತ್ತೇ ತಿಳಿದುಕೊಂಡು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದಂತೆ ಪಾಪ್ಯುಲೇಷನ್ ಎಕ್ಸ್ ಚೇಂಜ್ ಗೆ ಹೋಗಬಹುದಿತ್ತು. ಆದರೆ ಆವತ್ತು ಗಾಂಧಿ ಮಾತು ಕೇಳಿಕೊಂಡು ಇವು ಯಾವೂ ಮಾಡಿಲ್ಲ.

ಆದರೆ ಈವತ್ತು ಪರಿಸ್ಥಿತಿ ಯಾವ ರೀತಿ ಆಗಿದೆ ನೋಡಿ. ಜಮ್ಮು ಕಾಶ್ಮೀರ ಒಂದು ರಾಷ್ಟ್ರ ಮುಸಲ್ಮಾನರಿಗೆ ಹೋದ ಕೂಡ್ಲೇ ಅಲ್ಲಿರುವಂತ ಕಾಶ್ಮೀರಿ ಪಂಡಿತರನ್ನು ಸಾರಾಸಗಟಾಗಿ ಆಚೆ ದಬ್ಬಿದ್ರು. ಆಂಧ್ರಪ್ರದೇಶ ಒಂದು ರಾಜ್ಯ ಕ್ರೈಸ್ತನ ಕೈಗೆ ಸಿಕ್ತು. ಪವಿತ್ರವಾದ ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು, ಮೀನಿನ ಎಣ್ಣೆ ಬಳಕೆ ಮಾಡಿ ಇಡೀ ಹಿಂದೂ ಸಮುದಾಯದ ನಂಬಿಕೆ ಧಕ್ಕೆ ಬರುವಂತಹ ಕೆಲಸವನ್ನು ಜಗಮೋಹನ್ ರೆಡ್ಡಿ ಎಂಬ ಕ್ರೈಸ್ತ ಮಾಡಿದ್ದಾನೆ. ಇಂದಾದರೂ ಹಿಂದೂಗಳು ಅರ್ಥಮಾಡಿಕೊಳ್ಳಬೇಕು. ನಾವು ಹಿಂದುತ್ವದ ಬಗ್ಗೆ ಮಾತನಾಡಿದರೆ ಮುಸಲ್ಮಾನರ ಬಾಹುಳ್ಯ, ಕ್ರಿಶ್ಚಿಯನ್ನರ ಮತಾಂತರದ ಬಗ್ಗೆ ಮಾತನಾಡಿದರೆ ನಮ್ಮ ಬಗ್ಗೆಯೇ ಒಂದು ರೀತಿ ಅಪಪ್ರಚಾರ ಮಾಡುವ ಹಿಂದೂಗಳು ಹೀಗೆ ಒಂದೊಂದೇ ರಾಜ್ಯ ಮುಸಲ್ಮಾನ, ಕ್ರಿಶ್ಚಿಯನ್ನರಿಗೆ ಹೋದರೆ ಹಿಂದೂಗಳು ದೇಶ ಬಿಟ್ಟು ಪಲಾಯನ ಮಾಡಬೇಕಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರತಾಪ್ ಸಿಂಹ ಮಾಧ್ಯಮಗಳ ಮುಂದೆ ಕಿಡಿ ಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಡ್ಡಿಗೆ ಪ್ರಾಣಿಗಳ ಕೊಬ್ಬು ಬಳಕೆ ವಿವಾದ: ಶುದ್ಧೀಕರಣಕ್ಕೆ ತಿರುಪತಿಯಲ್ಲಿ ಶಾಂತಿ ಹೋಮ