Publish Date: Thu, 09 May 2019 (09:00 IST)
Updated Date: Thu, 09 May 2019 (09:02 IST)
ನವದೆಹಲಿ: ತಮ್ಮನ್ನು ದುರ್ಯೋಧನ ಎಂದು ಜರೆದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಟೀಕೆ ಮಾಡಿದ್ದಕ್ಕೆ ಪ್ರತಿಕ್ರಿಯಿಸಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
‘ಕಾಂಗ್ರೆಸ್ ಬೋಫೋರ್ಸ್ ಹಗರಣದ ಬಗ್ಗೆ ಸ್ಪಷ್ಟನೆ ನೀಡಬೇಡವೇ? ಭೋಪಾಲ್ ಗ್ಯಾಸ್ ಟ್ರಾಜಿಡಿಗೆ ಉತ್ತರಿಸಬೇಡವೇ? 1984 ರಲ್ಲಿ ನಡೆದ ಸಿಖ್ಖರ ಮಾರಣ ಹೋಮದ ಬಗ್ಗೆ ಸ್ಪಷ್ಟನೆ ನೀಡಬೇಡವೇ?’ ಎಂದ ಪ್ರಧಾನಿ ಮೋದಿ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ.
ಇನ್ನು, ಪ್ರಿಯಾಂಕಾ ವಾದ್ರಾ ತಮ್ಮನ್ನು ದುರ್ಯೋಧನ ಎಂದು ಟೀಕಿಸಿದ್ದಕ್ಕೆ ಏನನ್ನುತ್ತೀರಿ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಇಂತಹ ಟೀಕೆಗಳಿಗೆ ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ