Select Your Language

Notifications

webdunia
webdunia
webdunia
webdunia

ರಾಜೀವ್ ಗಾಂಧಿ ಭ್ರಷ್ಟಾಚಾರಿ ಎಂದ ಪ್ರಧಾನಿ ಮೋದಿಗೆ ಕ್ಲೀನ್ ಚಿಟ್ ನೀಡಿದ ಚುನಾವಣಾ ಆಯೋಗ

ಪ್ರಧಾನಿ ಮೋದಿ
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ತಿರುಗೇಟು ನೀಡುವಾಗ ನಿಮ್ಮ ತಂದೆ ರಾಜೀವ್ ಗಾಂಧಿ ನಂ.1 ಭ್ರಷ್ಟಾಚಾರಿಯಾಗಿ ಮಡಿದರು ಎಂದಿದ್ದ ಪ್ರಧಾನಿ ಮೋದಿಗೆ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿದೆ.


ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಭಾರತ ರತ್ನ ಪುರಸ್ಕೃತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಬಗ್ಗೆ ಭ್ರಷ್ಟಾಚಾರಿ ನಂ.1 ಎಂದಿದ್ದಕ್ಕೆ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ಆಪಾದನೆ ಮಾಡಿತ್ತು.

ಆದರೆ ಈ ಬಗ್ಗೆ ವಿಚಾರಣೆ ನಡೆಸಿದ ಚುನಾವಣಾ ಆಯೋಗ ಪ್ರಧಾನಿ ಹೇಳಿಕೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಅಂಶ ಇಲ್ಲ ಎಂದು ಪರಿಗಣಿಸಿ ಪ್ರಕರಣವನ್ನು ಕೈ ಬಿಟ್ಟಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಇವುಗಳ ಹಾವಳಿ ತಾಳಲಾರದೆ ಠಾಣೆಯನ್ನೇ ಬಿಟ್ಟು ಪೊಲೀಸರು ಓಡಿಹೋಗಿದ್ದಾರಂತೆ