Select Your Language

Notifications

webdunia
webdunia
webdunia
webdunia

ಸಂಸತ್ತಿನ ಮೇಲಿನ ಉಗ್ರರ ದಾಳಿಗೆ ಇಂದಿಗೆ 19 ವರ್ಷ

ಸಂಸತ್ತಿನ ಮೇಲಿನ ಉಗ್ರರ ದಾಳಿಗೆ ಇಂದಿಗೆ 19 ವರ್ಷ
ನವದೆಹಲಿ , ಭಾನುವಾರ, 13 ಡಿಸೆಂಬರ್ 2020 (10:27 IST)
ನವದೆಹಲಿ: ಸಂಸತ್ತಿನ ಮೇಲೆ ಲಷ್ಕರ್ ಇ ತೊಯ್ಬಾ ಉಗ್ರರು ದಾಳಿ ಮಾಡಿ ಇಂದಿಗೆ 19 ವರ್ಷ ಕಳೆದಿದೆ. ಈ ದಿನದಂದು ಸಂಸತ್ತಿನ ರಕ್ಷಣೆ ಮಾಡಲು ಹೋಗಿ ಪ್ರಾಣತೆತ್ತವರನ್ನು ಪ್ರಧಾನಿ ಮೋದಿ ಸ್ಮರಿಸಿಕೊಂಡಿದ್ದಾರೆ.


‘2001 ರಲ್ಲಿ ನಮ್ಮ ಸಂಸತ್ತಿನ ಮೇಲೆ ನಡೆದ ಹೇಡಿಗಳ ದಾಳಿಯನ್ನು ನಾವು ಎಂದಿಗೂ ಮರೆಯಲಾರೆವು. ನಮ್ಮ ಸಂಸತ್ತನ್ನು ಕಾಪಾಡಲು ತಮ್ಮ ಅಮೂಲ್ಯ ಜೀವವನ್ನು ಬಲಿದಾನ ಮಾಡಿದವರನ್ನು ಸ್ಮರಿಸಿಕೊಳ್ಳುತ್ತೇವೆ. ಅವರಿಗೆ ಭಾರತ ಎಂದೆಂದಿಗೂ ಚಿರಋಣಿಯಾಗಿರುತ್ತದೆ’ ಎಂದು ಪ್ರಧಾನಿ ಮೋದಿ ಸ್ಮರಿಸಿಕೊಂಡಿದ್ದಾರೆ.

2001 ರಲ್ಲಿ ಸಂಸತ್ತು ಅಧಿವೇಶನ ನಡೆಯುತ್ತಿರುವಾಗಲೇ ಲಷ್ಕರ್ ಇ ತೊಯ್ಬಾ ಮತ್ತು ಜೈಶೆ ಮೊಹಮ್ಮದ್ ಬೆಂಬಲಿತ ಉಗ್ರರು ದಾಳಿ ನಡೆಸಿದ್ದರು.ಈ ಸಂದರ್ಭದಲ್ಲಿ 8 ಮಂದಿ ಭದ್ರತಾ ಸಿಬ್ಬಂದಿ ಮತ್ತು ಓರ್ವ ನಾಗರಿಕ ಸೇರಿದಂತೆ ಸುಮಾರು 9 ಮಂದಿ ಸಾವನ್ನಪ್ಪಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಾರಿಗೆ ನೌಕರರ ಮುಷ್ಕರದಿಂದ ಬಿಎಂಟಿಸಿ, ಕೆಎಸ್ ಆರ್ ಟಿಸಿಗೆ ಕೋಟಿ ಕೋಟಿ ನಷ್ಟ