Select Your Language

Notifications

webdunia
webdunia
webdunia
webdunia

ಗಡಿಯಲ್ಲಿ ಚೀನಾ ತಕರಾರು: ರಕ್ಷಣಾ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಮೋದಿ

ಗಡಿಯಲ್ಲಿ ಚೀನಾ ತಕರಾರು: ರಕ್ಷಣಾ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಮೋದಿ
ನವದೆಹಲಿ , ಬುಧವಾರ, 27 ಮೇ 2020 (09:51 IST)
ನವದೆಹಲಿ: ಗಡಿಯಲ್ಲಿ ಚೀನಾ ರಹಸ್ಯವಾಗಿ ಸುಸಜ್ಜಿತ ವಾಯುನೆಲೆ ಸ್ಥಾಪಿಸಿದ್ದಲ್ಲದೆ, ಸೈನಿಕರ ಸಂಖ್ಯೆ ಹೆಚ್ಚಿಸಿದ ಬೆನ್ನಲ್ಲೇ ಭಾರತ ಮತ್ತಷ್ಟು ಜಾಗೃತವಾಗಿದೆ.


ಚೀನಾ ಸೇನೆ ವಾಯುನೆಲೆ ಸ್ಥಾಪಿಸಿರುವ ವಿಡಿಯೋಗಳು ಬಹಿರಂಗವಾಗುತ್ತಿದ್ದಂತೇ ಸ್ವತಃ ಪ್ರಧಾನಿ ಮೋದಿ ರಕ್ಷಣಾ ಪಡೆಯ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದು, ಪರಿಸ್ಥಿತಿಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭದ್ರತಾ ಸಲೆಗಾರ ಅಜಿತ್ ದೋವಲ್, ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಮೂರೂ ಸೇನಾ ದಳದ ಮುಖ್ಯಸ್ಥರೊಂದಿಗೆ ಪ್ರಧಾನಿ ಮೋದಿ ಸಭೆ ನಡೆಸಿದ್ದಾರೆ. ಭಾರತ ಕೂಡಾ ಚೀನಾದಷ್ಟೇ ಸಂಖ್ಯೆಯಲ್ಲಿ ಸೈನಿಕರನ್ನು ಜಮಾವಣೆ ಮಾಡಿದೆ. ಅಲ್ಲದೆ, ಗಡಿಯಲ್ಲಿ ಕಟ್ಟೆಚ್ಚರ ವಹಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ ಒಂದೂವರೆ ಲಕ್ಷ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ