ಸಂಪುಟ ಸಭೆ ನಡೆಸಲಿರುವ ಪ್ರಧಾನಿ ಮೋದಿ: ಎರಡು ಪ್ರಮುಖ ನಿರ್ಧಾರಗಳ ಸಾಧ್ಯತೆ

ಬುಧವಾರ, 20 ಮೇ 2020 (10:29 IST)
ನವದೆಹಲಿ: ಪ್ರಧಾನಿ ಮೋದಿ ಇಂದು ಸಂಪುಟ ಸಭೆ ನಡೆಸಲಿದ್ದು, ಕೃಷಿಕರಿಗೆ ಸಂಬಂಧಿಸಿದ ಎರಡು ಪ್ರಮುಖ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
 


ಕೃಷಿಕರು ಮತ್ತು ಕೃಷಿ ವಲಯಕ್ಕೆ ಸಂಬಂಧಿಸಿದ ಎರಡು ನಿರ್ಧಾರಗಳ ಕೈಗೊಳ್ಳುವುದರ ಜತೆಗೆ ಕೊರೋನಾ ನಿರ್ವಹಣೆ, ಆಂಫನ್ ಚಂಡಮಾರುತ ಪರಿಸ್ಥಿತಿ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ.

ಬೆಳಿಗ್ಗೆ 11 ಗಂಟೆಗೆ ಸಭೆ ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಮತ್ತು ಕೇಂದ್ರ ವಿಪತ್ತು ದಳದ ಅಧಿಕಾರಿಗಳೂ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕ್ವಾರಂಟೈನ್ ನಲ್ಲಿದ್ದ ಕಾರ್ಮಿಕನಿಂದ ಪೊಲೀಸ್ ಮೇಲೆ ಹಲ್ಲೆ