Publish Date: Sun, 24 May 2020 (09:36 IST)
Updated Date: Sun, 24 May 2020 (09:39 IST)
ನವದೆಹಲಿ: ಭಾರತ ಒಂದೆಡೆ ಕೊರೋನಾ ವಿರುದ್ಧ ಹೋರಾಡುತ್ತಿದ್ದರೆ, ಇತ್ತ ಜಗತ್ತಿಗೇ ರೋಗ ಹರಡಿದ ಚೀನಾ ಭಾರತದ ಗಡಿಯಲ್ಲಿ ಸೇನೆ ಜಮಾವಣೆ ಮಾಡಿ ಕಿರಿಕ್ ಮಾಡುತ್ತಿದೆ.
ಪೂರ್ವ ಲಡಾಕ್, ಗಲ್ವಾನ್ ನಲ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇನೆ ಜಮಾವಣೆ ಮಾಡುತ್ತಿರುವ ಚೀನಾ ಭಾರತದೊಂದಿಗೆ ಗಡಿ ತಂಟೆ ಮಾಡುತ್ತಿದೆ.
ಇನ್ನೊಂದೆಡೆ ಚೀನಾ ಮತ್ತು ಭಾರತೀಯ ಸೇನೆಯ ಉನ್ನತಾಧಿಕಾರಿಗಳು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಿದ್ದಾದರೂ ಪ್ರಯೋಜನವಾಗಿಲ್ಲ. ಚೀನಾ ತನ್ನ ತುಕಡಿಯನ್ನು ಹೆಚ್ಚಿಸಿದ ಹಿನ್ನಲೆಯಲ್ಲಿ ಭಾರತವೂ ಗಡಿಯಲ್ಲಿ ಹೆಚ್ಚಿನ ಸೈನಿಕರನ್ನು ಜಮಾವಣೆ ಮಾಡಿ ಕಟ್ಟೆಚ್ಚರ ವಹಿಸಿದೆ.