Daily Horoscope

Select Your Language

Notifications

webdunia
webdunia
webdunia
webdunia

ರಾಜರು ಎಂದು ಪರಿಗಣಿಸಿಕೊಳ್ಳುವವರು ಆರ್ಥಿಕ ಅಸಮಾನತೆ ಬಗ್ಗೆ ಮಾತನಾಡುತ್ತಾರೆ: ಪ್ರಧಾನಿ ಮೋದಿ ತಿರುಗೇಟು

Modi speech in Rajyasabha
Photo Credit: X
ನವದೆಹಲಿ: ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು ತಮ್ಮ ಮತ್ತು ಸರ್ಕಾರದ ಬಗ್ಗೆ ಮಾಡುತ್ತಿರುವ ಟೀಕೆಗಳಿಗೆ ಇಂದು ಪ್ರಧಾನಿ ಮೋದಿ ರಾಜ್ಯ ಸಭೆ ಭಾಷಣದಲ್ಲಿ ತಿರುಗೇಟು ನೀಡಿದ್ದಾರೆ. ಕೆಲವರು ತಮ್ಮನ್ನು ತಾವು ರಾಜರು ಎಂದು ಪರಿಗಣಿಸಿಕೊಳ್ಳುವವರು ಆರ್ಥಿಕ ಅಸಮಾನತೆ ಬಗ್ಗೆ ಮಾತನಾಡುತ್ತಾರೆ ಎಂದಿದ್ದಾರೆ.

ರಾಜ್ಯಸಭೆಯಲ್ಲಿ ಇಂದು ಸುದೀರ್ಘ ಭಾಷಣ ಮಾಡಿದ ಪ್ರಧಾನಿ ಮೋದಿ ವಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಿದ್ದಲ್ಲದೆ ತಮ್ಮ ಸರ್ಕಾರದ ಸಾಧನೆಯನ್ನು ಒತ್ತಿ ಹೇಳಿದರು. ನುಸುಳುಕೋರರ ಪರವಾಗಿ ಇರುವ ಇವರನ್ನು ಯುವಕರು ಹೇಗೆ ಕ್ಷಮಿಸುತ್ತಾರೆ? ನುಸುಳುಕೋರರನ್ನು ಇವರು ಗುರಾಣಿಯಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಇಡೀ ಜಗತ್ತು ಭಾರತದ ಮೇಲೆ ಈಗ ವಿಶ್ವಾಸವಿರಿಸಿದೆ. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ನಮ್ಮ ದೇಶ 11 ನೇ ಸ್ಥಾನದಲ್ಲಿತ್ತು. ಈಗ ನಾವು ವಿಶ್ವದ ಮೂರನೇ ಅತೀ  ದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿದ್ದೇವೆ. ಯುರೋಪ್ ಜೊತೆ 9 ಜಾಗತಿಕ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ. ಕಾಂಗ್ರೆಸ್ ನಿಂದಾಗಿ ದೇಶದ ಆರ್ಥಿಕತೆ ನೆಲಕಚ್ಚಿತ್ತು. ಕಾಂಗ್ರೆಸ್ ಆಡಳಿತ ತಪ್ಪುಗಳನ್ನು ಸರಿಪಡಿಸಲೇ ನಮಗೆ ಹೆಚ್ಚು ಸಮಯ ಹಿಡಿಯಿತು. ಈಗ ಅಮೆರಿಕಾದಂತಹ ದೇಶಗಳೊಂದಿಗೆ ನಮ್ಮ ದೇಶ ಒಪ್ಪಂದ ಮಾಡಿಕೊಂಡಿದೆ.

ಇಂದು ಭಾರತ ವಿಶ್ವದ ಇತರೆ ರಾಷ್ಟ್ರಗಳಿಗೆ ಸ್ಪಂದಿಸುವ ರಾಷ್ಟ್ರವಾಗಿದೆ. ಇಡೀ ವಿಶ್ವವೇ ಅಸ್ಥಿರತೆಯಿಂದ ಬಳಲುತ್ತಿದೆ. ಇದನ್ನು ಸರಿಪಡಿಸಲು ಹೆಣಗಾಡುತ್ತಿದೆ. ಹಲವು ರಾಷ್ಟ್ರಗಳು ಯುದ್ಧಗಳಿಂದಾಗಿ ನಲುಗಿ ಹೋಗಿದೆ. ಆದರೆ ಭಾರತ ಎಲ್ಲರ ಆಶಾಕಿರಣವಾಗಿ ಬೆಳೆಯುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಬಳಿ ಬಂದು ಕಾಂಗ್ರೆಸ್ಸಿಗರು ಗಲಾಟೆ ಮಾಡಲು ಪ್ಲ್ಯಾನ್ ಮಾಡಿದ್ದರು, ಅದಕ್ಕೆ ಬರಬೇಡಿ ಎಂದೆ: ಸ್ಪೀಕರ್ ಓಂ ಬಿರ್ಲಾ