Publish Date: Thu, 05 Feb 2026 (17:44 IST)
Updated Date: Thu, 05 Feb 2026 (17:45 IST)
ನವದೆಹಲಿ: ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಬಂದು ಕಾಂಗ್ರೆಸ್‌ನವರು ಗಲಾಟೆ ಮಾಡಲು ಯೋಜನೆ ಹಾಕಿಕೊಂಡಿರುವ ಬಗ್ಗೆ ಸ್ಪೀಕರ್ ಓಂ ಬಿರ್ಲಾ ಅವರು ಸ್ಪೋಟಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಪ್ರಧಾನಿ ಮೋದಿ ಲೋಕಸಭೆ ಭಾಷಣವನ್ನು ಏಕೆ ತಪ್ಪಿಸಿಕೊಂಡರು ಎಂಬ ವಿಚಾರಕ್ಕೆ ಸ್ಪೀಕರ್ ಓಂ ಬಿರ್ಲಾ ಪ್ರತಿಕ್ರಿಯಿಸಿದ್ದಾರೆ.
ರಾಷ್ಟ್ರಪತಿಯವರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ಉತ್ತರಿಸಲು ನಿಗದಿಪಡಿಸಿದಾಗ ಈ ಗಲಾಟೆ ನಡೆಸಲು ತೀರ್ಮಾನಿಸಿರುವುದಾಗಿ ಬಿರ್ಲಾ ಹೇಳಿದರು.
"ಪ್ರಧಾನಮಂತ್ರಿಯವರು ಸದನದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಪ್ರತಿಕ್ರಿಯಿಸಬೇಕಾಗಿದ್ದಾಗ, ಹಲವಾರು ಕಾಂಗ್ರೆಸ್ ಸಂಸದರು ಪ್ರಧಾನಿಯವರ ಪೀಠದ ಬಳಿ ಬಂದುಅನುಚಿತ ಘಟನೆಯನ್ನು ಸೃಷ್ಟಿಸುವ ಪ್ಲಾನ್ ಹಾಕಿಕೊಂಡಿದ್ದರು. ಅಂತಹ ಘಟನೆ ನಡೆದಿದ್ದರೆ, ಅದು ದೇಶದ ಪ್ರಜಾಪ್ರಭುತ್ವ ಸಂಪ್ರದಾಯಗಳನ್ನು ಹರಿದು ಹಾಕುತ್ತಿತ್ತು. ಇದನ್ನು ತಡೆಯಲು, ಪ್ರಧಾನಿಯವರು ಸದನಕ್ಕೆ ಬರದಂತೆ ವಿನಂತಿಸಿದೆ. ಅಂತಹ ಘಟನೆ ನಡೆದಿದ್ದರೆ, ಅದು ಪ್ರಜಾಪ್ರಭುತ್ವ ಸಂಪ್ರದಾಯಗಳನ್ನು ಹರಿದು ಹಾಕುತ್ತಿತ್ತು. ಇದನ್ನು ತಡೆಯಲು, ಪ್ರಧಾನಿಯವರು ಸದನಕ್ಕೆ ಬರದಂತೆ ವಿನಂತಿಸಿದೆ ಮತ್ತು ಸದನದ ಅಧ್ಯಕ್ಷತೆ ವಹಿಸಿ, ಅದರ ಉನ್ನತ ಸಂಪ್ರದಾಯಗಳನ್ನು ಎತ್ತಿಹಿಡಿಯುವುದು ನನ್ನ ಜವಾಬ್ದಾರಿಯಾಗಿದೆ ಎಂದು ಹೇಳಿದರು..