Publish Date: Sat, 17 Sep 2022 (11:19 IST)
Updated Date: Sat, 17 Sep 2022 (11:21 IST)
ಬೆಂಗಳೂರು: ಇಂದು ಪ್ರಧಾನಿ ಮೋದಿಗೆ 72 ನೇ ಜನ್ಮದಿನದ ಸಂಭ್ರಮ. ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಸ್ಯಾಂಡಲ್ ವುಡ್ ತಾರೆಯರು ಶುಭ ಕೋರಿದ್ದಾರೆ.
ಸಂಸದರಾಗಿರುವ ನಟ ಜಗ್ಗೇಶ್, ನಟಿ ತಾರಾ ಅನುರಾಧ, ಕ್ರಿಕೆಟಿಗ ಸುರೇಶ್ ರೈನಾ ಸೇರಿದಂತೆ ಅನೇಕರು ಸೋಷಿಯಲ್ ಮೀಡಿಯಾ ಮೂಲಕ ಶುಭ ಕೋರಿದ್ದಾರೆ.
ಪ್ರಧಾನಿ ಮೋದಿಗೆ ಇಂದು 72 ನೇ ಜನ್ಮದಿನವಾಗಿದ್ದು, ಈ ಬಾರಿ ಕೇಕ್, ಹಾರ, ತುರಾಯಿ ಆಚರಣೆಗಳ ಬದಲು ಬಿಜೆಪಿ ವತಿಯಿಂದ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ ಭಾರತದಲ್ಲಿ ಚೀತಾ ಪ್ರಾಣಿಗಳ ಸಂತತಿ ಉಳಿಸಿಕೊಳ್ಳಲು ವಿದೇಶದಿಂದ 6 ಚೀತಾಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.