ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಎರಡು ದಿನಗಳ ಕೇರಳ ಪ್ರವಾಸ ನಡೆಯಲಿದೆ, ಸಂಜೆ ಕೊಚ್ಚಿ ಮೆಟ್ರೋ ಹಂತ-2 ಯೋಜನೆ ಶಂಕುಸ್ಥಾಪನೆ ನೆರವೇರಿಸಿದರು. ಇದರ ಜೊತೆಗೆ ಮೊದಲನೇ ಉದ್ಘಾಟನಾ ಕಾರ್ಯಕ್ರಮದ ಜೊತೆಗೆ ಅವರು ಭಾಗವಹಿಸಲಿದ್ದಾರೆ. ಮುಖ್ಯವಾಗಿ ಭಾರತದಲ್ಲಿ ಮೊದಲ ಬಾರಿಗೆ ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಯುದ್ಧನೌಕೆ ಐಎನ್‌ಎಸ್ ವಿಕ್ರಾಂತ್ ಅನ್ನು ಪ್ರಧಾನಿ ನಾಳೆ ಲೋಕಾರ್ಪಣೆ ಮಾಡುತ್ತಾರೆ. ಭಾರತೀಯ ನೌಕಾಪಡೆಯ ಆಂತರಿಕ ಯುದ್ಧನೌಕೆ ವಿನ್ಯಾಸ ಬ್ಯೂರೋ ವಿನ್ಯಾಸಗೊಳಿಸಿದ ಮತ್ತು ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವಾಲಯದ ಅಡಿಯಲ್ಲಿ ಸಾರ್ವಜನಿಕ ವಲಯದ ಕೊಚ್ಚಿನ್ ಶಿಪ್‌ಯಾರ್ಡ್‌ನಿಂದ ವಿಕ್ರಾಂತ್ ನಿರ್ಮಿಸಲಾಗಿದೆ. 45 ಸಾವಿರ ಟನ್ ಭಾರ ಇರುವ ವಿಕ್ರಾಂತ್ ಯುದ್ಧ ವಿಮಾನ ವಾಹಕ ಸುಮಾರು 20 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧವಾಗಿದೆ. ಸುಮಾರು 12,500 ಚದರ ಮೀಟರ್ ವ್ಯಾಪ್ತಿ ಹೊಂದಿದೆ. ಇದಕ್ಕೆ 6 ಹೆಲಿಕಾಪ್ಟರ್ ಮತ್ತು 12 ಫೈಟರ್‌ಜೆಟ್ ಹೊರುವ ಸಾಮರ್ಥ್ಯವಿದೆ. ಇಂದು ಸಂಜೆ 6 ಗಂಟೆಗೆ ಕೇರಳಕ್ಕೆ ಆಗಮಿಸಲಿರುವ ನರೇಂದ್ರ ಮೋದಿ ಕೊಚ್ಚಿನ್ ವಿಮಾನ ನಿಲ್ದಾಣದ ಬಳಿಯ ಕಾಲಟಿ ಗ್ರಾಮದಲ್ಲಿರುವ ಆದಿ ಶಂಕರಾಚಾರ್ಯರ ಜನ್ಮಸ್ಥಳವಾದ ಆದಿಶಂಕರ ಜನ್ಮಭೂಮಿ ಕ್ಷೇತ್ರಕ್ಕೆ ಭೇಟಿ ನೀಡುವರು. ಈ ಸಂದರ್ಭದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡುತ್ತಾರೆ.