ನವದೆಹಲಿ: 6 ವರ್ಷದ ಬಾಲಕಿಯೊಬ್ಬಳು ಮ್ಯಾಗಿ ನೂಡಲ್ಸ್, ಪೆನ್ಸಿಲ್ ಗೆ ಬೆಲೆ ಹೆಚ್ಚಳವಾಗಿದ್ದಕ್ಕೆ ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾಳೆ.
ಉತ್ತರಪ್ರದೇಶದ ಕೃತಿ ದುಬೆ ಎಂಬ ಬಾಲೆ ಪ್ರಧಾನಿ ಮೋದಿಗೆ ತನ್ನ ಸ್ವ ಹಸ್ತಾಕ್ಷರದಲ್ಲಿ ಹಿಂದಿ ಭಾಷೆಯಲ್ಲಿ ಪತ್ರ ಬರೆದು ತನಗಾಗುತ್ತಿರುವ ಸಮಸ್ಯೆ ಬಗ್ಗೆ ವಿವರವಾಗಿ ಹೇಳಿದ್ದಾಳೆ.
ಕೃತಿ ದುಬೆ ಪತ್ರ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮ್ಯಾಗಿ ನೂಡಲ್ಸ್ ಬೆಲೆ ಹೆಚ್ಚಳವಾಗಿದೆ. ಪೆನ್ಸಿಲ್ ಬೆಲೆಯನ್ನೂ ಹೆಚ್ಚು ಮಾಡಿದ್ದಾರೆ. ಇದರಿಂದ ನನಗೆ ಅಮ್ಮ ಪೆನ್ಸಿಲ್ ಕೇಳಿದರೆ ಹೊಡೆಯುತ್ತಾಳೆ, ನನ್ನ ಸಹಪಾಠಿಗಳೂ ಪೆನ್ಸಿಲ್ ಕಳ್ಳತನ ಮಾಡುತ್ತಿದ್ದಾರೆ ಎಂದು ಪುಟ್ಟ ಪೋರಿ ಪತ್ರದಲ್ಲಿ ಬರೆದಿದ್ದಾಳೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!