Select Your Language

Notifications

webdunia
webdunia
webdunia
webdunia

ಆ.1ರಿಂದ ಹೈಕೋರ್ಟ್‌ನಲ್ಲೂ ಕಾಗದ ರಹಿತ ಕೆಲಸ ಚಾಲನೆ

ಆ.1ರಿಂದ ಹೈಕೋರ್ಟ್‌ನಲ್ಲೂ ಕಾಗದ ರಹಿತ ಕೆಲಸ ಚಾಲನೆ
ತಿರುವನಂತಪುರಂ , ಮಂಗಳವಾರ, 2 ಆಗಸ್ಟ್ 2022 (15:38 IST)
ತಿರುವನಂತಪುರಂ : ತಂತ್ರಜ್ಞಾನ ಬೆಳೆದಂತೆ ಈಗ ಪ್ರತಿಯೊಬ್ಬರ ಕೈಯಲ್ಲೂ ಟಚ್ಸ್ಕ್ರೀನ್ ಮೊಬೈಲ್ಗಳಿವೆ.

ಕಂಪ್ಯೂಟರ್ ಬಳಕೆಯೂ ಹೆಚ್ಚಾಗಿದೆ. ಡಿಜಿಟಲೀಕರಣ ಹಾಗೂ ಪರಿಸರ ಕಾಳಜಿ ಪ್ರೋತ್ಸಾಹಕ್ಕೆ ಕೇರಳದ ಮೂರು ಕೋರ್ಟ್ಗಳು ಮುಂದಾಗಿದ್ದು, ಕೋರ್ಟ್ಗಳಲ್ಲಿ ಕಾಗದ ರಹಿತ ನ್ಯಾಯಾಂಗ ವ್ಯವಸ್ಥೆ ಜಾರಿಗೆ ಮುನ್ನುಡಿ ಬರೆದಿವೆ.

ಕೇರಳದ 3 ಕೋರ್ಟ್ಗಳಲ್ಲಿ ಕಾಗರ ರಹಿತ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದೆ. ಕೇರಳ ಹೈಕೋರ್ಟ್ ಆ.1ರಿಂದ ಇದನ್ನು ಅಳವಡಿಸಿಕೊಂಡಿದೆ. ನ್ಯಾಯಾಂಗ ವ್ಯವಸ್ಥೆಯ ಯಾವುದೇ ಕಾರ್ಯ ಹಾಗೂ ಪ್ರಕ್ರಿಯೆಗಳು ಕಾಗದ ರಹಿತವಾಗಿ ನಡೆಯಲಿವೆ.

ಈ ಕ್ರಮ ಪರಿಸರ ಸ್ನೇಹಿಯಾಗಿದೆ. ಸಮಯ ಉಳಿತಾಯ ಮತ್ತು ವೆಚ್ಚ ಕಡಿಮೆಗೊಳಿಸಲು ಸಹಕಾರಿಯಾಗಿದೆ. ದೊಡ್ಡ ದೊಡ್ಡ ಫೈಲ್ಗಳನ್ನು ಸಾಗಿಸುವ ಪರಿಪಾಠವೂ ತಪ್ಪುತ್ತದೆ ಎಂದು ಹೈಕೋರ್ಟ್ನ ಕ್ರಮವನ್ನು ವಕೀಲರು ಸ್ವಾಗತಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಡ್ರೋನ್‌ ದಾಳಿ ಖಂಡಿಸಿದ ತಾಲಿಬಾನ್‌!