Publish Date: Thu, 14 Mar 2024 (09:50 IST)
Updated Date: Thu, 14 Mar 2024 (09:53 IST)
ಪಾಟ್ನಾ: ಫೋಟೋಗ್ರಾಫರ್ ಆಗಿ ಬಂದವನು ವರನ ಅಪ್ರಾಪ್ತ ತಂಗಿ ಜೊತೆ ಓಡಿ ಹೋದ ಘಟನೆ ಬಿಹಾರದಲ್ಲಿ ನಡೆದಿದೆ. ಘಟನೆ ಸಂಬಂಧ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಮಾರ್ಚ್ 6 ರಂದು ಬಾಲಕಿ ಮಾರುಕಟ್ಟೆಗೆ ಹೋಗುತ್ತೇನೆಂದು ಮನೆ ಬಿಟ್ಟವಳು ಮನೆಗೆ ಮರಳಲಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ. ಮಗನ ಮನೆಗೆ ಬಂದಿದ್ದ ಫೋಟೋಗ್ರಾಫರ್ ನನ್ನ ಮಗಳನ್ನು ಅಪಹರಿಸಿದ್ದಾರೆ ಎಂದು ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಮಾರ್ಚ್ 6 ರಂದು ಮದುವೆ ನಡೆದಿತ್ತು. ವರನ ಮೆರವಣಿಗೆಯ ಫೋಟೋ, ವಿಡಿಯೋ ಸೆರೆಹಿಡಿಯಲು ಅದೇ ಗ್ರಾಮದ ಯುವಕನನ್ನು ನೇಮಿಸಲಾಗಿತ್ತು. ಅದೇ ದಿನ ಸಂಜೆ ವರನ ಸಹೋದರಿ ಮಾರುಕಟ್ಟೆಗೆಂದು ಹೋದವಳು ಹಿಂತಿರುಗಿ ಬಂದಿಲ್ಲ. ಎಷ್ಟೊತ್ತಾದರೂ ಮಗಳು ಮನೆಗೆ ಬರದೇ ಇದ್ದಾಗ ಗಾಬರಿಗೊಂಡ ಕುಟುಂಬಸ್ಥರು ಊರಲ್ಲೆಲ್ಲಾ ಹುಡುಕಾಡಿದ್ದಾರೆ. ಎರಡು ದಿನದ ಬಳಿಕವೂ ಪತ್ತೆಯಾಗದೇ ಇದ್ದಾಗ ಪೊಲೀಸರಿಗೆ ದೂರು ನೀಡಿದ್ದಾರೆ.
ಮಗನ ಮದುವೆಗೆ ಬಂದಿದ್ದ ಫೋಟೋಗ್ರಾಫರೇ ಆಕೆಯನ್ನು ಅಪಹರಿಸಿರುವುದಾಗಿ ಯಾರೋ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಆತನೇ ಮಗಳ ಮನವೊಲಿಸಿ ಕರೆದೊಯ್ದಿದ್ದಾನೆ ಎಂದು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.