Select Your Language

Notifications

webdunia
webdunia
webdunia
webdunia

ದಕ್ಷಿಣ ಕನ್ನಡದಲ್ಲಿ ಅರುಣ್ ಕುಮಾರ್ ಪುತ್ತಿಲಗೆ ಶಾಕ್ ಕೊಟ್ಟ ಬಿಜೆಪಿ

Arun Kumar Putthila

Krishnaveni K

ಮಂಗಳೂರು , ಗುರುವಾರ, 14 ಮಾರ್ಚ್ 2024 (09:32 IST)
ಮಂಗಳೂರು: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಬ್ರಿಜೇಶ್ ಚೌಟಾಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಲಾಗಿದೆ. ಈ ಮೂಲಕ ಬಿಜೆಪಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಿದೆ.

ಒಂದು ವೇಳೆ ನಳಿನ್ ಕುಮಾರ್ ಕಟೀಲ್ ಗೆ ನಾಲ್ಕನೇ ಬಾರಿ ಟಿಕೆಟ್ ನೀಡಿದ್ದರೆ ದಕ್ಷಿಣ ಕನ್ನಡದಲ್ಲಿ ಕಾರ್ಯಕರ್ತರಿಂದಲೇ ವಿರೋಧ ವ್ಯಕ್ತವಾಗುತ್ತಿತ್ತು. ಜೊತೆಗೆ ಅರುಣ್ ಕುಮಾರ್ ಪುತ್ತಿಲ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದರು. ಆಗ ವಿಧಾನಸಭೆ ಚುನಾವಣೆಯಲ್ಲಿ ನಡೆದಂತೆ ಮತ ವಿಭಜನೆಯಾಗಿ ಬಿಜೆಪಿಗೆ ಸ್ಥಾನ ಕೈತಪ್ಪಿಹೋಗುವ ಭೀತಿಯಿತ್ತು.

ಇದೇ ಕಾರಣಕ್ಕೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಿಂದ ನಳಿನ್ ಕುಮಾರ್ ಕಟೀಲ್ ಗೆ ಅವಕಾಶ ನೀಡಿಲ್ಲ. ಇದರಿಂದಾಗಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಹೊರಟಿರುವ ಅರುಣ್ ಕುಮಾರ್ ಪುತ್ತಿಲಗೂ ಶಾಕ್ ಕೊಟ್ಟಂತಾಗುತ್ತದೆ. ಜೊತೆಗೆ ಸ್ಥಳೀಯ ಕಾರ್ಯಕರ್ತರ ಆಕ್ರೋಶವೂ ತಣ್ಣಗಾಗಿಸಿದಂತಾಗಿದೆ.

ಈಗ ಅರುಣ್ ಕುಮಾರ್ ಪುತ್ತಿಲ ಬಂಡಾಯ ಅಭ್ಯರ್ಥಿಯಾಗಿ ನಿಂತರೂ ಅವರಿಗೆ ಬೆಂಬಲ ಸಿಗುವುದು ಕಡಿಮೆ. ಯಾಕೆಂದರೆ ದಕ್ಷಿಣ ಕನ್ನಡದ ಬಿಜೆಪಿ ಬೆಂಬಲಿಗರು ಈಗ ಹೇಗಾದರೂ ಸರಿಯೇ ಮತ್ತೊಮ್ಮೆ ಮೋದಿಯನ್ನು ಅಧಿಕಾರಕ್ಕೆ ತರಲು ಬಿಜೆಪಿ ಅಭ್ಯರ್ಥಿಗೇ ಮತ ಹಾಕುವುದಾಗಿ ಕುಳಿತಿದ್ದಾರೆ. ಜೊತೆಗೆ ಅರುಣ್ ಕುಮಾರ್ ಪುತ್ತಿಲಗೆ ಸಪೋರ್ಟ್ ಮಾಡಿ ಬಿಜೆಪಿ ಸೋಲುವುದನ್ನು ಕಾಣಲು ಅಲ್ಲಿನ ಬಿಜೆಪಿ ಬೆಂಬಲಿಗರು ಈ ಬಾರಿ ಖಂಡಿತಾ ಇಷ್ಟಪಡುವುದಿಲ್ಲ. ಹೀಗಾಗಿ ಅತ್ತ ಅರುಣ್ ಕುಮಾರ್ ಗೂ ಶಾಕ್, ಇತ್ತ ಕಾರ್ಯಕರ್ತರ ವಿರೋಧಕ್ಕೂ ತಣ್ಣೀರು ಹಾಕಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿಕೆಟ್ ಮಿಸ್ ಆದ ಬೆನ್ನಲ್ಲೇ ಪ್ರತಾಪ್ ಸಿಂಹ ಟ್ವೀಟ್ ವೈರಲ್