Select Your Language

Notifications

webdunia
webdunia
webdunia
webdunia

ಹೊಸ ಕಾರು ಆಕ್ಸಿಡೆಂಟ್ ಮಾಡಿಕೊಂಡ ತುಕಾಲಿ ಸಂತೋಷ್

Tukali Santhosh
ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ನಟ ತುಕಾಲಿ ಸಂತೋಷ್ ಇತ್ತೀಚೆಗಷ್ಟೇ ಖರೀದಿ ಮಾಡಿದ್ದ ದುಬಾರಿ ಬೆಲೆಯ ಕಾರನ್ನು ಆಕ್ಸಿಡೆಂಟ್ ಮಾಡಿಕೊಂಡಿದ್ದಾರೆ.

ಬಿಗ್ ಬಾಸ್ ನಲ್ಲಿ ಫೈನಲ್ ವರೆಗೂ ಬಂದಿದ್ದ ತುಕಾಲಿ ಸಂತೋಷ್ ಅಲ್ಲಿ ಸಿಕ್ಕಿದ್ದ ಸಂಭಾವನೆಯಿಂದ 20 ಲಕ್ಷ ರೂ. ಬೆಲೆಯ ಕಿಯಾ ಕಾರನ್ನು ಖರೀದಿ ಮಾಡಿದ್ದರು. ಈ ಕಾರು ಖರೀದಿ ಮಾಡಿದ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ತುಕಾಲಿ ಸಂತೋಷ್ ಮತ್ತು ಅವರ ಪತ್ನಿ ಮಾನಸಾ ಕನಸು ನನಸಾದ ಗಳಿಗೆ ಎಂದು ಬರೆದುಕೊಂಡಿದ್ದರು.

ಇತ್ತೀಚೆಗೆ ಕಲರ್ಸ್ ಕನ್ನಡ ರಿಯಾಲಿಟಿ ಶೋ ಒಂದರಲ್ಲೂ ಅವರ ಕಾರು ಖರೀದಿ ವಿಚಾರ ಸುದ್ದಿಯಾಗಿತ್ತು. ಇಡೀ ಸೆಟ್ ಗೆ ಸಿಹಿ ಹಂಚಿ ಸಂಭ್ರಮಿಸಿದ್ದರು. ಇದೀಗ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇಹಳ್ಳಿಯಲ್ಲಿ ಕಾರು ಮತ್ತು ಆಟೋ ಡಿಕ್ಕಿಯಾಗಿದೆ. ಪರಿಣಾಮ ಆಟೋ ನಜ್ಜುಗುಜ್ಜಾಗಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ.

ಇದೀಗ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಎರಡೂ ಕಡೆಯವರು ದೂರು-ಪ್ರತಿದೂರು ದಾಖಲಿಸಿದ್ದಾರೆ. ಸಂತೋಷ್ ಪತ್ನಿ ಮಾನಸಾ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ದುಬಾರಿ ಕಾರು ಖರೀದಿಸಿದ ಮರುಕ್ಷಣವೇ ಈ ರೀತಿ ಆಗಿದ್ದು ವಿಪರ್ಯಾಸ.

Share this Story:

Follow Webdunia kannada

ಮುಂದಿನ ಸುದ್ದಿ

ದೀಪಿಕಾ ದಾಸ್ ಮದುವೆ ಬೆನ್ನಲ್ಲೇ ಶೈನ್ ಶೆಟ್ಟಿ ಪೋಸ್ಟ್ ವೈರಲ್